ಆರೋಪಿಗಳಿಗೆ ಜಾಮೀನು

01 08 2025_BGRV RURAL_PAGE_02
ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯದ ಬಳಿ ದೂರುದಾರ ಪ್ರಥಮ್​ ರನ್ನು ಕರೆದೊಯ್ದು ಇನ್​ಸ್ಪೆಕ್ಟರ್​ ಸಾದಿಕ್​ ಪಾಷ ಸ್ಥಳ ಮಹಜರು ನಡೆಸಿದರು.
Published on

ದೊಡ್ಡಬಳ್ಳಾಪುರ : ಚಿತ್ರನಟ ಪ್ರಥಮ್​ಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಬೇಕರಿ ರು, ಯಶಸ್ವಿನಿಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಮತ್ತೊಂದೆಡೆ ದೂರುದಾರ ಪ್ರಥಮ್​ ಗ್ರಾಮಾಂತರ ಠಾಣೆಯ ಇನ್​ಸ್ಪೆಕ್ಟರ್​ ಸಾದಿಕ್​ ಪಾಷಾ ಎದುರು ವಿಚಾರಣೆಗೆ ಹಾಜರಾಗಿದ್ದು, ಹಲ್ಲೆ ಯತ್ನದ ಸ್ಥಳದ ಮಹಜರು ಮಾಡಲಾಗಿದೆ.

ಜುಲೈ 22ರಂದು ಪ್ರಥಮ್​ ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯದ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆ ಆಗಮಿಸಿದ್ದರು, ಈ ವೇಳೆ ದೇವಸ್ಥಾನಕ್ಕೆ ಬಂದಿದ್ದ ಯಶಸ್ವಿನಿ ಮತ್ತು ಬೇಕರಿ ರು ಮಾರಾಕಾಸ್ತ$ಗಳನ್ನು ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರಥಮ್​ ದೂರು ದಾಖಲು ಮಾಡಿದ್ದರು. ಜು.29ರಂದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜೀವ ಬೆದರಿಕೆ ಪ್ರಕರಣ ಹಿನ್ನೆಲೆಯಲ್ಲಿ ಆರೋಪಿಗಳಾದ ಯಶಸ್ವಿನಿ, ಬೇಕರಿ ರು ದೊಡ್ಡಬಳ್ಳಾಪುರದ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ, ತಲಾ 10 ಸಾವಿರ ನಗದು ಶ್ಯೂರಿಟಿ ಮತ್ತು ತನಿಖೆಗೆ ಸಹಕರಿಸುವಂತೆ ಷರತ್ತು ವಿಧಿಸಿದ್ದಾರೆ. ವಿಚಾರಣೆಗೆ ಬರುವಂತೆ ಇನ್​ಸ್ಪೆಕ್ಟರ್​ ಸಾಧಿಕ್​ ಪಾಷಾ ದೂರುದಾರ ಪ್ರಥಮ್​ಗೆ ನೋಟಿಸ್​ ನೀಡಿದ್ದರು, ಗುರುವಾರ ಪ್ರಥಮ್​ ವಿಚಾರಣೆಗೆ ಹಾಜರಾದರು, ಸ್ಥಳ ಮಹಜರ್​ಗಾಗಿ ರಾಮಯ್ಯನಪಾಳ್ಯದ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಪ್ರಥಮ್​ ಅವರನ್ನು ಪೊಲೀಸರು ಕರೆದುಕೊಂಡು ಹೋಗಿ ಮಹಜರು ಮಾಡಿದ್ದಾರೆ.

ಪ್ರಥಮ್​ಗೆ ಮಸಿ ಬಳಿಯಲು ಯತ್ನ! : ಸಂವಿಧಾನ ಶಿಲ್ಪಿ ಡಾ.ಬಿ.ಆರ್​.ಅಂಬೇಡ್ಕರ್​ ವಿಚಾರವಾಗಿ ವ್ಯಂಗ್ಯವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಪ್ರಥಮ್​ಗೆ ಅಂಬೇಡ್ಕರ್​ ಸೇನೆ ಹೋರಾಟಗಾರರು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಎದುರು ಮಸಿ ಬಳಿಯುವ ಯತ್ನ ನಡೆಸಿದರು. ಪ್ರಥಮ್​ ಮಾತಿನ ಭರದಲ್ಲಿ ಅಂಬೇಡ್ಕರ್​ ಬಗ್ಗೆ ಮಾತನಾಡಿದ್ದರು ಎಂದು ಆರೋಪಿಸಿ ಮಸಿ ಬಳಿಯಲು ಯತ್ನ ಮಾಡಲಾಗಿದೆ. ಪ್ರಥಮ್​ ಗ್ರಾಮಾಂತರ ಠಾಣೆಯಲ್ಲಿ ವಿಚಾರಣೆ ಮುಗಿಸಿ ವಾಪಸ್​ ಹೊರಡುವಾಗ ಮಸಿ ಬಳಿಯಲು ದಲಿತ ಮುಖಂಡರು ಮುಂದಾದಾಗ ಪೊಲೀಸರು ತಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net