ಗ್ರೇಟ್​ ಎಸ್ಕೇಪ್​: ಭೀಕರ ಅಪಘಾತದ ದೃಶ್ಯ ವೈರಲ್ ಆಯಿತು..

915415
Published on

ಬಹುತೇಕ ಎಲ್ಲ ಕಡೆ ರಸ್ತೆಗಳನ್ನು ಗಮನಿಸಿದರೆ ಪ್ರತಿ ಸೆಕೆಂಡ್​ ಗೂ ಒಬ್ಬ ಅಲ್ದಿದ್ರೆ ಇನ್ನೊಬ್ಬ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋದು ಕಣ್ಣಿಗೆ ರಾಚುತ್ತೆ. ಚಾಲನಾ ಪರವಾನಗಿ ಪಡೆಯುವಾಗ ಸಂಚಾರ ನಿಯಮಗಳ ಸಂಪೂರ್ಣ ಅರಿವನ್ನು ಎಲ್ಲರೂ ಪಡೆದಿರುತ್ತಾರೆ. ಆದರೆ, ರಸ್ತೆ ಬಂದ್ರೆ ಆನೆ ಸಾಗಿದ್ದೇ ದಾರಿ ಎನ್ನುವಂತಹ ನಡವಳಿಕೆಯನ್ನು ಪ್ರದರ್ಶಿಸುತ್ತಾರೆ. ಇದು ಅನೇಕ ಅಪಘಾತಗಳಿಗೆ ಕಾರಣವೂ ಹೌದು.

ಇಂತಹ ಭೀಕರ ಅಪಘಾತವೊಂದರ ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಯಾವ ಊರು, ಪ್ರದೇಶ ಎಂಬುದರ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಆದರೆ, ವಿಡಿಯೋದಲ್ಲಿನ ದೃಶ್ಯ ಗಮನಿಸಿದರೆ ಸ್ಕೂಟರ್ ಸವಾರ ಸಂಚಾರ ನಿಯಮ ಉಲ್ಲಂಘಿಸಿ ತಿರುವೊಂದರಲ್ಲಿ ಬೃಹತ್ ಟ್ಯಾಂಕರ್ ಒಂದನ್ನು ಓವರ್ ಟೇಕ್ ಮಾಡುತ್ತಿದ್ದು, ಸ್ಕಿಡ್ ಆಗಿ ಬೀಳುವುದು ಕಾಣಿಸುತ್ತದೆ. ಹಾಗೆ ಬಿದ್ದವನು ತಲೆ ಮೊದಲು ಟ್ಯಾಂಕರ್​ನ ಮುಂಭಾಗದ ಚಕ್ರಕ್ಕೆ ಬಡಿದು ಇನ್ನೇನು ಆತ ಹಿಂಭಾಗದ ಚಕ್ರದಡಿಗೆ ಬೀಳಬೇಕು ಎನ್ನುವಷ್ಟರಲ್ಲಿ ಪವಾಡ ಸದೃಶ ರೀತಿಯಲ್ಲಿ ಈಚೆಗೆ ಪಲ್ಟಿ ಹೊಡೆದು ಬಚಾವ್ ಆಗ್ತಾನೆ.

ಹೆಲ್ಮೆಟ್ ಹಾಕದೆ ಸ್ಕೂಟರ್ ಸವಾರಿ ಮಾಡಿ ಮತ್ತೊಂದು ಸಂಚಾರ ನಿಯಮವನ್ನೂ ಆತ ಉಲ್ಲಂಘಿಸಿದ್ದ. ಅಷ್ಟಾಗ್ಯೂ, ಸ್ಕೂಟರ್ ಸವಾರನ ಅದೃಷ್ಟ ಚೆನ್ನಾಗಿತ್ತು. ಆಯುಸ್ಸೂ ಗಟ್ಟಿಯಾಗಿತ್ತು. ಅದಕ್ಕೆ ಬದುಕಿ ಉಳಿದ. ಸಂಚಾರ ನಿಯಮ ಪಾಲಿಸದೇ ಇದ್ದರೆ ಏನಾಗುತ್ತದೆ ಎಂಬುದಕ್ಕೆ ಇದು ಜೀವಂತ ನಿದರ್ಶನ. ಮೇಲಿನ ವಿಡಿಯೋ ಕ್ಲಿಕ್ ಮಾಡಿ ಅಪಘಾತದ ದೃಶ್ಯ ನೋಡಿದರೇನೆ ಅದು ಕೊಡುವ ಸಂದೇಶ ಮನವರಿಕೆಯಾದೀತು. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net