More

    ತಳವಾರ ಮತ್ತು ಪರಿವಾರ ಸಮುದಾಯದ ಮೀಸಲು ಗೊಂದಲ ಬಗೆಹರಿಸಲು ಮನವಿ

    ವಿಜಯಪುರ: ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿ ಗೊಂದಲ ನಿವಾರಿಸಲು ಸಮುದಾಯದ ಮುಖಂಡರು ಆಗ್ರಹಿಸಿದರು. ಮಂಗಳವಾರ ಸಿಎಂ ಯಡಿಯೂರಪ್ಪ ವಿಮಾನಿಕ ಸಮೀಕ್ಷೆಗೆ ಆಗಮಿಸಿದ ವೇಳೆ ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿದ ಅವರು ಆ ಬಳಿಕ ಖುದ್ದಾಗಿ ಮನವಿ ಸಲ್ಲಿಸಿದರು.

    ಕೇಂದ್ರ ಸರ್ಕಾರ ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಎಸ್ ಟಿ ಮೀಸಲು ನೀಡಲು ರಾಜ್ಯ ಪತ್ರ ಹೊರಡಿಸಿದ್ದರೂ ರಾಜ್ಯದಲ್ಲಿ ಇನ್ನೂ ಅನುಷ್ಟಾನಕ್ಕೆ ಬಂದಿಲ್ಲ. ಇದಕ್ಕೆಲ್ಲಾ ಅಧಿಕಾರಿಗಳು ಅಮವಶ್ಯಕ ಗೊಂದಲ ಸೃಷ್ಟಿಸುತ್ತಿರುವುದೇ ಕಾರಣ ಎಂದರು.

    ಇದನ್ನೂ ಓದಿ: VIDEO: ಚೇರ್​ನಿಂದ ಕೆಳಗೆ ಬಿದ್ದು ಟ್ರೋಲ್​ ಆದ ಪಾಕ್​ ಕ್ರಿಕೆಟಿಗ..!

    ತಳವಾರ ಮತ್ತು ಪರಿವಾರ ಎಂಬುದು ನಾಯಕ ಮತ್ತು ನಾಯಕಡ ಎಂಬ ಪದದ ಪರ್ಯಾಯ ಪದ. ಆದರೆ ಕೆಲ ಅಧಿಕಾರಿಗಳು ತಳವಾರ ಪದ ಅಂಬಿಗ, ಕೋಳಿ, ಕಬ್ಬಲಿಗ, ಗಂಗಾಮತ ಸಮುದಾಯದ ಪಟ್ಟಿಯಲ್ಲಿ ಸೇರಿಸುವ ವಿಫಲ ಯತ್ನ ನಡೆಸಿದ್ದಾರೆ. ವಾಸ್ತವದಲ್ಲಿ ಅಂಬಿಗರ ಚೌಡಯ್ಯ ನಿಗಮದಲ್ಲಿ ತಳವಾರ ಪದವೇ ಇಲ್ಲವೆಂದು‌ ಮನವರಿಕೆ ಮಾಡಿದರು. ಇದೀಗ ಶಾಲೆ- ಕಾಲೇಜ್ ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಅಧಿಕಾರಿ ಗಳು ಗೊಂದಲ ಬಗೆ ಹರಿಸದ ಕಾರಣ ಸಾಮನ್ಯ ವರ್ಗದಡಿ ಪ್ರವೇಶ ಪಡೆಯುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಕೂಡಲೇ‌ ಮುಖ್ಯಮಂತ್ರಿಗಳು ಸಮಸ್ಯೆ ಬಗೆ ಹರಿಸಬೇಕೆಂದು ವಿನಂತಿಸಿದರು.

    ಇದನ್ನೂ ಓದಿ: ಕರೊನಾದಿಂದ 165 ಮಂದಿ ಗುಣಮುಖ ; 4408ಕ್ಕೇರಿದ ಸೋಂಕಿತರ ಸಂಖ್ಯೆ

    ಮಾಜಿ ಶಾಸಕ ಶರಣಪ್ಪ ಸುಣಗಾರ, ಬಿಜೆಪಿ ಮುಖಂಡ ಅನಿಲ‌ ಜಮಾದಾರ, ಧರ್ಮರಾಜ ವಾಲೀಕಾರ, ಭರತ ಕೋಳಿ, ಸಾಹೇಬಗೌಡ ಬಿರಾದಾರ ಮತ್ತಿತರರಿದ್ದರು.

    ಮಹಿಳೆಯರ ಮೈಗ್ರೇನ್ ಸಮಸ್ಯೆಗೆ ಪರಿಹಾರವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts