

Grandfather : ಮಕ್ಕಳ ಅಸೆಯನ್ನು ತಂದೆ-ತಾಯಿ ಅಥವಾ ಅಜ್ಜ-ಅಜ್ಜಿ ಈಡೇರಿಸುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ತನ್ನ ಅಜ್ಜ-ಅಜ್ಜಿಯ ಕನಸನ್ನು ನೆರವೇರಿಸಿದ್ದಾರೆ. ಅಲ್ಲದೆ, ಈ ಕುರಿತು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಹೌದು, ಇತ್ತೀಚೆಗೆ ಚೆನ್ನೈನಿಂದ ಕೊಯಮತ್ತೂರಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಈ ಹೃದಯಸ್ಪರ್ಶಿ ದೃಶ್ಯಗಳು ಕಾಣಿಸಿಕೊಂಡಿವೆ. ಇಂಡಿಗೋ ವಿಮಾನಯಾನ ಸಂಸ್ಥೆಯ ಪೈಲಟ್ ಆಗಿರುವ ಪ್ರದೀಪ್ ಕೃಷ್ಣನ್, ತಮ್ಮ ವಾಯುಯಾನ ಪ್ರಯಾಣದ ತುಣುಕುಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆ ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ತನ್ನ ಅಜ್ಜಿ ಮತ್ತು ತಾಯಿ ಕೂಡ ಇದ್ದಾರೆ ಎಂದು ಪೈಲಟ್ ಹೇಳಿದಾಗ ವಿಮಾನದಲ್ಲಿದ್ದ ಎಲ್ಲರೂ ಅಚ್ಚರಿಗೊಂಡು ಚಪ್ಪಾಳೆ ಹೊಡೆದು ಬೇಷ್ ಹೇಳಿದ್ದಾರೆ.
"ನನ್ನ ಕುಟುಂಬ ನನ್ನೊಂದಿಗೆ ಪ್ರಯಾಣಿಸುತ್ತಿದೆ ಎಂದು ಘೋಷಿಸಲು ತುಂಬಾ ಸಂತೋಷವಾಗಿದೆ. ನನ್ನ ತಾತ, ಅಜ್ಜಿ, ಅಮ್ಮ 29 ನೇ ಸಾಲಿನಲ್ಲಿ ಕುಳಿತಿದ್ದಾರೆ. ನನ್ನ ಅಜ್ಜ ಇಂದು ನನ್ನೊಂದಿಗೆ ಮೊದಲ ಬಾರಿಗೆ ವಿಮಾನದಲ್ಲಿ ಹಾರುತ್ತಿದ್ದಾರೆ" ಎಂದು ಅವರು ತಮಿಳು ಮತ್ತು ಇಂಗ್ಲಿಷ್ ಮಿಶ್ರಣದಲ್ಲಿ ಪ್ರಯಾಣಿಕರಿಗೆ ಹೇಳಿದರು.
"ನಾನು ಅವರ TVS50 ಕಾರಿನ ಹಿಂದಿನ ಸೀಟಿನಲ್ಲಿ ಹಲವು ಬಾರಿ ಪ್ರಯಾಣಿಸಿದ್ದೇನೆ, ಈಗ ಅವರಿಗೆ ಸವಾರಿ ಮಾಡುವ ಸರದಿ ನನ್ನದು'' ಎಂದು ಹೇಳಿದ್ದಾರೆ.
ಪೈಲಟ್ ಪ್ರಯಾಣಿಕರನ್ನು "ಹಾಯ್" ಹೇಳಲು ಪ್ರೋತ್ಸಾಹಿಸಿದನು, ಅವನ ಅಜ್ಜ ತನ್ನ ಸೀಟಿನಲ್ಲಿ ಎದ್ದು ನಿಂತು ಕ್ಯಾಬಿನ್‌ನಲ್ಲಿದ್ದ ಎಲ್ಲರನ್ನೂ ಸ್ವಾಗತಿಸಲು ಕೈ ಜೋಡಿಸಿ ನಮಸ್ಕರಿಸಿದರು. ಈ ಹೃದಯಸ್ಪರ್ಶಿ ಕ್ಷಣವನ್ನು ವೀಕ್ಷಿಸಿದ ಪ್ರಯಾಣಿಕರು ಚಪ್ಪಾಳೆ ತಟ್ಟಿದರು.(ಏಜೆನ್ಸೀಸ್)