ಪೋಪ್​ ಫ್ರಾನ್ಸಿಸ್​ ವಿಧಿವಶ; ಹೊಸ ಪೋಪ್​ ಆಯ್ಕೆ ಮಾಡೊದೇಗೆ?; ಇಲ್ಲಿದೆ ಸಂಪೂರ್ಣ ಮಾಹಿತಿ | Pope Francis

dk - 2025-04-21T174358.256
Published on

Pope Francis : ಕ್ಯಾಥೋಲಿಕ್​ ಕ್ರೈಸ್ತರ ಧರ್ಮಗುರು ಪೋಪ್​​ ಫ್ರಾನ್ಸಿಸ್​(88) ವ್ಯಾಟಿಕನ್​​ನಲ್ಲಿ ಸೋಮವಾರ ವಿಧಿವಶರಾಗಿದ್ದಾರೆ. ಈ ಮೂಲಕ ಕ್ರಿಶ್ಚಿಯನ್​ ಧರ್ಮದ ಪ್ರಮುಖ ಆಧ್ಯಾತ್ಮಿಕ ನಾಯಕನ ಕೊಂಡಿ ಕಳಚಿದೆ.

ಪೋಪ್ ಫ್ರಾನ್ಸಿಸ್ (88) ನಿಧನರಾಗಿದ್ದಾರೆ. ಅವರು ಈಸ್ಟರ್ ಸೋಮವಾರದಂದು ವ್ಯಾಟಿಕನ್‌ನ ಕಾಸಾ ಸಾಂತಾ ಮಾರ್ಟಾ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ಪೋಪ್​​ ಫ್ರಾನ್ಸಿಸ್​ ನಿಧನದ ಕುರಿತು ವಾಟಿಕನ್​ ಸಿಟಿ ವಿಡಿಯೋದಲ್ಲಿ ಹಂಚಿಕೊಂಡಿದೆ.

ಬೆನೆಡಿಕ್ಟ್ XVI ರಾಜೀನಾಮೆ ನೀಡಿದ ನಂತರ ಫ್ರಾನ್ಸಿಸ್ 2013ರಲ್ಲಿ ಪೋಪ್ ಆದರು. ಸುಮಾರು 1,300 ವರ್ಷಗಳಲ್ಲಿ ಯುರೋಪಿಯನ್ ಅಲ್ಲದ ವ್ಯಕ್ತಿ ಪೋಪ್ ಆಗಿರುವುದು ಇದೇ ಮೊದಲು. ಫ್ರಾನ್ಸಿಸ್‌ಗೆ ಅಮೆರಿಕದ ಪ್ರಜೆಯಾಗಿ ಆ ಅವಕಾಶ ಸಿಕ್ಕಿತು.

ಪೋಪ್‌ಗಳ ನಡುವಿನ ಚರ್ಚ್ ವಿಷಯಗಳನ್ನು ನೋಡಿಕೊಳ್ಳುವ ಜವಾಬ್ದಾರಿಯುತ ಕ್ಯಾಮೆರ್ಲೆಂಗೊ ಕಾರ್ಡಿನಲ್ ಕೆವಿನ್ ಫಾರೆಲ್ ಎನ್ನುವವರು ಪೋಪ್​ ಮೃತಪಟ್ಟಿರುವುದ ಧೃಢಿಕರಿಸಿದ್ದಾರೆ.

ಕಾರ್ಡಿನಲ್ ಪೋಪ್​ ಬಗ್ಗೆ ಹೇಳಿದ್ದೇನು..?

ಇಂದು ಬೆಳಿಗ್ಗೆ 7:35 ಕ್ಕೆ ರೋಮ್‌ನ ಬಿಷಪ್ ಫ್ರಾನ್ಸಿಸ್ ತಂದೆಯ(ದೇವರ) ಮನೆಗೆ ಮರಳಿದರು. ಅವರ ಇಡೀ ಜೀವನವು ಭಗವಂತನ ಮತ್ತು ಅವರ ಚರ್ಚ್‌ನ ಸೇವೆಗೆ ಸಮರ್ಪಿತವಾಗಿತ್ತು." ಫ್ರಾನ್ಸಿಸ್ ಜಗತ್ತಿಗೆ ಧೈರ್ಯ ಮತ್ತು ಸಹಾನುಭೂತಿಯಿಂದ ಸುವಾರ್ತೆಯನ್ನು ವಿಶೇಷವಾಗಿ ಬಡವರು ಮತ್ತು ಹಿಂದುಳಿದವರಿಗೆ ಬದುಕಲು ಕಲಿಸಿದ್ದಾರೆ ಎಂದಿದ್ದಾರೆ.

ಹೊಸ ಪೋಪ್​ ಆಯ್ಕೆ ಹೇಗೆ..?

ಪೋಪ್ ಹುದ್ದೆ ಈಗ ಖಾಲಿಯಾಗಿರುವುದರಿಂದ, ಕ್ಯಾಥೋಲಿಕ್ ಚರ್ಚ್ ಗಂಭೀರ ಮತ್ತು ಐತಿಹಾಸಿಕ ಪರಿವರ್ತನೆಯ ಹೊಸ ಅವಧಿಯನ್ನು ಆರಂಭವಾಗಲಿದೆ. ಹೊಸ ಪೋಪ್ ಆಯ್ಕೆಯ ಮೇಲ್ವಿಚಾರಣೆಯನ್ನು ಕಾರ್ಡಿನಲ್ಸ್ ಕಾಲೇಜು ವಹಿಸುತ್ತದೆ. ಅವರು ರೋಮ್‌ನಲ್ಲಿ ಕಾನ್ಕ್ಲೇವ್ ಎಂದು ಕರೆಯಲ್ಪಡುವ ರಹಸ್ಯ ಸಭೆಗಾಗಿ ಒಟ್ಟುಗೂಡುತ್ತಾರೆ. ಕಾನ್ಕ್ಲೇವ್ ಬಹಳ ಹಿಂದಿನಿಂದಲೂ ಪೋಪ್ ಅನ್ನು ಆಯ್ಕೆ ಮಾಡುವ ಔಪಚಾರಿಕ ಕಾರ್ಯವಿಧಾನವಾಗಿದೆ. ಇಲ್ಲಿ ಮತದಾನ ನಡೆಯುತ್ತದೆ.

ಮತದಾನ ಮಾಡೋದು ಯಾರು..?

80 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಇಲ್ಲಿ ಮತದಾನ ಮಾಡುತ್ತಾರೆ. ಅದರಲ್ಲೂ ಕಾರ್ಡಿನಲ್ಸ್ ಮಾತ್ರ ಈ ಆರ್ಹತೆ ಹೊಂದಿರುತ್ತಾರೆ. ಈ ಸಭೆಯಲ್ಲಿ 120ಕ್ಕೂ ಅಧಿಕ ಕಾರ್ಡಿನಲ್ಸ್​ಗಳಿದ್ದಾರೆ. ಭಾರತದಿಂದಲೂ ಒಬ್ಬರಿದ್ದಾರೆ. ಆದರೆ, ಪೋಪ್‌ಗಳು ತಮ್ಮ ವಿವೇಚನೆಯಿಂದ ಈ ಸಂಖ್ಯೆಯನ್ನು ಮೀರಬಹುದು.

ಸಿಸ್ಟೀನ್ ಚಾಪೆಲ್‌ನಲ್ಲಿ ನಡೆಯುವ ಈ ಸಮಾವೇಶವು ಕಟ್ಟುನಿಟ್ಟಾದ ಗೌಪ್ಯತೆಯಡಿಯಲ್ಲಿ ನಡೆಯುತ್ತದೆ. ಮತದಾನ ಪ್ರಕ್ರಿಯೆಯಲ್ಲಿ ಚರ್ಚಿಸಿದ ಅಥವಾ ನಿರ್ಧರಿಸಿದ ಯಾವುದನ್ನೂ ಬಹಿರಂಗಪಡಿಸುವುದಿಲ್ಲ ಎಂದು ಪ್ರತಿಯೊಬ್ಬ ಕಾರ್ಡಿನಲ್ ಪ್ರಮಾಣವಚನ ಸ್ವೀಕರಿಸುತ್ತಾರೆ. ಈ ಪ್ರಮಾಣವಚನವನ್ನು ಉಲ್ಲಂಘಿಸುವುದರಿಂದ ಸ್ವಯಂಚಾಲಿತವಾಗಿ ಬಹಿಷ್ಕಾರವಾಗುತ್ತದೆ.

ಮತದಾನ ಕಾರ್ಯ ನಿರ್ವಹಿಸೊದೇಗೆ..?

ಗೌಪತ್ಯ ಪ್ರಮಾಣ: ಎಲ್ಲಾ ಕಾರ್ಡಿನಲ್ಸ್​ಗಳು ಸಂಪೂರ್ಣ ಗೌಪತ್ಯೆಯನ್ನ ಎತ್ತಿಹಿಡಿಯುದಕ್ಕಾಗಿ ಪ್ರತಿಜ್ಞ ಮಾಡುತ್ತಾರೆ.

ಮತದಾನ: ಪ್ರತಿಯೊಬ್ಬ ಕಾರ್ಡಿನಲ್ಸ್​ ತಮ್ಮ ಆಯ್ಕೆ ಆಭ್ಯರ್ಥಿಯ ಹೆಸರನ್ನು ಪೇಪರ್​ ತುಂಡಲ್ಲಿ ಬರೆದು ಪಾತ್ರೆಯಲ್ಲಿಡುತ್ತಾರೆ.

ಎಣಿಕೆ: ಮತಗಳನ್ನು ಗಟ್ಟಿಯಾಗಿ ಕೂಗಲಾಗುತ್ತದೆ ಮತ್ತು ಏಣಿಕೆ ಮಾಡಲಾಗುತ್ತೆ. ಪೋಪ್​ ಆಭ್ಯರ್ಥಿಯಾಗಲು ಮೂರನೇ ಎರಡರಷ್ಟು ಮತದಾನ ಅಗತ್ಯವಿದೆ.

ಹೊಗೆಯ ಸಂಕೇತ: ಯಾವುದೇ ಅಭ್ಯರ್ಥಿ ಗೆಲ್ಲದಿದ್ದರೆ. ಮತ ಪತ್ರಗಳನ್ನು ಸುಡಲಾಗುತ್ತದೆ. ಇದರಿಂದ ಬರುವ ಹೊಗೆಯಿಂದ ಅರ್ಥಮಾಡಿಕೊಳ್ಳಬೇಕು. ಕಪ್ಪು ಹೊಗೆ ಬಂದರೆ ಮತದಾನ ವಿಫಲವಾಗಿದೆ ಅಂತ. ಬಿಳಿ ಹೊಗೆ ಬಂದ್ರೆ ಹೊಸ ಪೋಪ್​ ಆಯ್ಕೆಯಾಗಿದ್ದಾನೆ ಎಂದರ್ಥ.

ಆಯ್ಕೆಗೆ ಎಷ್ಟುದಿನ ಸಮಯ: ಒಂದು ದಿನ ಅಥವಾ ಎರಡು ದಿನಗಳು ಆಗಬಹುದು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net