

Pope Francis : ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ (88) ವ್ಯಾಟಿಕನ್ ಸಿಟಿಯಲ್ಲಿ ಸೋಮವಾರ ವಿಧಿವಶರಾಗಿದ್ದಾರೆ ಎಂದು ವರದಿಯಾಗಿದೆ.
ಪೋಪ್ ಫ್ರಾನ್ಸಿಸ್ ನಿಧನದ ಕುರಿತು ವಾಟಿಕನ್ ವಿಡಿಯೋದಲ್ಲಿ ಹಂಚಿಕೊಂಡಿದೆ. ಪೋಪ್ ಫ್ರಾನ್ಸಿಸ್ (88) ನಿಧನರಾಗಿದ್ದಾರೆ. ಅವರು ಈಸ್ಟರ್ ಸೋಮವಾರದಂದು ವ್ಯಾಟಿಕನ್‌ನ ಕಾಸಾ ಸಾಂತಾ ಮಾರ್ಟಾ ನಿವಾಸದಲ್ಲಿ ಕೊನೆಯುಸಿರೆಳೆದರು. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆದ ನಂತರ ಆಸ್ಪತ್ರೆಯಿಂದ ಬಿಡುಗಡೆಯಾದರು. ಅಲ್ಲದೆ, ಭಾನುವಾರ ಈಸ್ಟರ್ ಸಂದರ್ಭದಲ್ಲಿ ಸಂದೇಶವನ್ನೂ ನೀಡಿದರು. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕೂಡ ಭಾನುವಾರ ವ್ಯಾಟಿಕನ್‌ನಲ್ಲಿ ಪೋಪ್ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ವ್ಯಾನ್ಸ್ ಅವರು ಪೋಪ್ ಅವರ ಆರೋಗ್ಯ ವಿಚಾರಿಸಿದರು. ಇದಾದ ಕೆಲವೇ ಗಂಟೆಗಳಲ್ಲಿ ಪೋಪ್ ಫ್ರಾನ್ಸಿಸ್ ನಿಧನರಾದರು.
ಪೋಪ್ ಫ್ರಾನ್ಸಿಸ್ ಅವರ ನಿಧನವನ್ನು ವ್ಯಾಟಿಕನ್ ಅಧಿಕೃತವಾಗಿ ಘೋಷಿಸಿದೆ. ಫ್ರಾನ್ಸಿಸ್ ಯುನೈಟೆಡ್ ಸ್ಟೇಟ್ಸ್‌ನ ಮೊದಲ ಪೋಪ್. ಅವರು 12 ವರ್ಷಗಳಿಂದ ಪೋಪ್ ಆಗಿದ್ದರು. ಬೆನೆಡಿಕ್ಟ್ XVI ರಾಜೀನಾಮೆ ನೀಡಿದ ನಂತರ ಫ್ರಾನ್ಸಿಸ್ 2013ರಲ್ಲಿ ಪೋಪ್ ಆದರು. ಸುಮಾರು 1,300 ವರ್ಷಗಳಲ್ಲಿ ಯುರೋಪಿಯನ್ ಅಲ್ಲದ ವ್ಯಕ್ತಿ ಪೋಪ್ ಆಗಿರುವುದು ಇದೇ ಮೊದಲು. ಫ್ರಾನ್ಸಿಸ್‌ಗೆ ಅಮೆರಿಕದ ಪ್ರಜೆಯಾಗಿ ಆ ಅವಕಾಶ ಸಿಕ್ಕಿತು.(ಏಜೆನ್ಸೀಸ್)