

ಬೆಂಗಳೂರು: ಕೆ.ಜಿ. ಹಳ್ಳಿ, ಪುಲಿಕೇಶಿನಗರದಲ್ಲಿ ಸಾವಿರಾರು ಗಣಪತಿ ಮೂರ್ತಿಗಳ ಮೆರವಣಿ ಮೂಲಕ ಹಲಸೂರು ಕೆರೆಗೆ ಬಂದು ವಿಸರ್ಜನೆ ನಡೆಸಲಾಗುತ್ತದೆ. ಸುಗಮ ಸಂಚಾರ ಸಲುವಾಗಿ ಶುಕ್ರವಾರ (ಸೆ.22) ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಸಂಚಾರ ವ್ಯವಸ್ಥೆಮಾರ್ಪಾಡು ಮಾಡಲಾಗಿದೆ. ಹಲಸೂರು ಕೆರೆಯ ಮುಖ್ಯದ್ವಾರ ಮತ್ತು ಸುತ್ತಲೂ ಇರುವ ರಸ್ತೆಗಳಲ್ಲಿ 22 ರಿಂದ 24ರವರೆಗೆ ಪಾರ್ಕಿಂಗ್ ನಿರ್ಬಂಧ ವಿಧಿಸಲಾಗಿದೆ.
*ನಾಗವಾರ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ರಸ್ತೆವರೆಗೆ
*ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೆ
*ಕೆನ್ಸಿಂಗ್‌ಟನ್ ಕಡೆಯಿಂದ ಎಂಇಜಿ ಮೂಲಕ ಹಲಸೂರು ಕೆರೆ ಕಡೆಗೆ ಸಂಚಾರ
*ಎಂಇಜಿ ಕಡೆಯಿಂದ ಕೆನ್ಸಿಂಗ್‌ಟನ್ ಕಡೆಗೆ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ
*ಥಣಿಸಂದ್ರ ಕಡೆಯಿಂದ ಶಿವಾಜಿನಗರ ಜಂಕ್ಷನ್ ಕಡೆಗೆ ಬರುವ ವಾಹನಗಳು ನಾಗವಾರ ಜಂಕ್ಷನ್‌ನಿಂದ ಎಡತಿರುವು ಪಡೆದು ಹೆಣ್ಣೂರು ಜಂಕ್ಷನ್‌ನಲ್ಲಿ ಬಲತಿರುವು-ಸಿದ್ದಪ್ಪ ರೆಡ್ಡಿ ಜಂಕ್ಷನ್ ಆಯೋಧ್ಯ ಜಂಕ್ಷನ್‌ನಿಂದ ಲಿಂಗರಾಜಪುರ ಐಟಿಸಿ ಪ್ಲೈ ಓವರ್ ಮೂಲಕ ರಾಬರ್ಟ್‌ಸನ್ ರಸ್ತೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಹೇನ್ಸ್ ರಸ್ತೆ ಮೂಲಕ ಶಿವಾಜಿನಗರ ತಲುಪಬಹುದು.
*ಶಿವಾಜಿನಗರ ಕಡೆಯಿಂದ ನಾಗವಾರ ಜಂಕ್ಷನ್ ಕಡೆಗೆ ಬರುವ ವಾಹನಗಳು ಸ್ಪೆನ್ಸರ್ ರಸ್ತೆಯಲ್ಲಿ ಕಡ್ಡಾಯವಾಗಿ ಬಲ ತಿರುವು ಪಡೆದು ಸ್ಪೆನ್ಸರ್ ರಸ್ತೆ ಮೂಲಕ ಕೋಲ್ಸ್ ರಸ್ತೆ ತಲುಪಿ ವೀಲರ್ಸ್ ರಸ್‌ಎ ಮೂಲಕ ಹೆಣ್ಣೂರು ಬಾಣಸವಾಡಿ, ಹಲಸೂರು ಕಡೆಗೆ ಸಾಗಬಹುದು.
*ಆರ್.ಟಿ.ನಗರದಿಂದ ಕಾವಲ್ ಬೈರಸಂದ್ರ ಮೂಲಕ ಬರುವ ವಾಹನಗಳು ಪುಷ್ಪಾಂಜಲಿ ಟಾಕೀಸ್ ಬಳಿ ಎಡ ತಿರುವು ಪಡೆದು ವೀರಣ್ಣಪಾಳ್ಯ ಜಂಕ್ಷನ್ ಕಡೆಗೆ ಬಲ ತಿರುವು ಪಡೆದು ನಾಗವಾರ ಜಂಕ್ಷನ್ ರಸ್‌ಎ ಕಡೆಗೆ ಸಂಚರಿಸಬಹುದು.
*ಪಾಟರಿ ಸರ್ಕಲ್‌ನಿಂದ ನಾಗವಾರ ಸಿಗ್ನಲ್ ಗೋವಿಂದಪುರ ಜಂಕ್ಷನ್‌ನಿಂದ ಗೋವಿಂದಪುರ ಪೊಲೀಸ್ ಠಾಣೆ ಮತ್ತು ಎಚ್‌ಬಿಆರ್ ಲೇಔಟ್ ಸಿದ್ದಪ್ಪ ರೆಡ್ಡಿ ಜಂಕ್ಷನ್‌ನಿಂದ ನರೇಂದ್ರ ಟೆಂಟ್ ಜಂಕ್ಷನ್ ವರೆಗೆ
*ಪಾಟರಿ ಸರ್ಕಲ್ ಎಂಎಂ ರಸ್ತೆಯಿಂದ ಲಾಜರ್ ರಸ್ತೆವರೆಗೆ ಹಾಗೂ ಸಿಂಧಿ ಕಾಲನಿ ಜಂಕ್ಷನ್‌ನಿಂದ ವಾರ್ ಮೊಮೊರಿಯಲ್ ಜಂಕ್ಷನ್‌ವರೆಗೆ