ಮದುವೆ ಮಂಟಪದಿಂದಲೇ ಗ್ರಾಪಂ ಚುನಾವಣಾ ಅಖಾಡಕ್ಕಿಳಿದ ಮದುಮಗ!

gp
Published on

ವಿಜಯಪುರ: ಮದುಮಕ್ಕಳು ಮದುವೆ ಮಂಟಪದಿಂದ ನೇರವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿದ್ದನ್ನು ನೋಡಿದ್ದೇವೆ, ಪರೀಕ್ಷೆ ದಿನವೇ ತಾಳಿಕಟ್ಟಿಸಿಕೊಂಡು ಮದುವೆ ಧಿರಿಸಿನಲ್ಲೇ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳನ್ನೂ ಕಂಡಿದ್ದೇವೆ. ಇದೀಗ ಇಲ್ಲೊಬ್ಬ ನಿಖಾ ಆದ ಕೂಡಲೇ ಹಾರ-ತುರಾಯಿ ಹಿಡಿದುಕೊಂಡೇ ಬಂದು ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.

ಇಂತಹದ್ದೊಂದು ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.

ಮಕ್ಬೂಲ್ ಬನ್ನೆಟ್ಟಿಯ ಮದುವೆ ಗುರುವಾರ ನಿಶ್ಚಯವಾಗಿತ್ತು. ದಾಂಪತ್ಯ ಜೀವನ್ನಕ್ಕೆ ಕಾಲಿಟ್ಟ ಮಕ್ಬೂಲ್​, ಮದುವೆ ಮಂಟಪದಿಂದಲೇ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ಚುನಾವಣೆ ರಾಜ್ಯದಲ್ಲಿ ಎರಡು ಹಂತದಲ್ಲಿ ನಡಡೆಯುತ್ತಿದೆ. ಡಿ.22ರಂದು ನಡೆಯುವ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನಾಳೆಯೇ(ಡಿ.11) ಕೊನೇ ದಿನ. ಎರಡನೇ ಹಂತದ ಚುನವಾಣೆ ಡಿ.27ರಂದು ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net