'ಹಣ ಕೊಟ್ಟೆ, ಮನೆ ಮಾಡಿ ಕೊಟ್ಟೆ, ನನ್ನೊಂದಿಗೆ ಲೈಂಗಿಕವಾಗಿ ಸಹಕರಿಸು... ಎಂದ ನಗರಸಭೆ ಮಾಜಿ ಸದಸ್ಯ'

haveri police
Published on

ಹಾವೇರಿ: ನಾನು ನಿನಗೆ ಹಣ ಕೊಟ್ಟೇನಿ, ಮನೆ ಮಾಡಿ ಕೊಟ್ಟೇನಿ, ನಾನು ಹೇಳಿದಂಗೆ ನೀನು ಕೇಳಬೇಕು, ನನ್ನೊಂದಿಗೆ ಲೈಂಗಿಕವಾಗಿ ಸಹಕರಿಸಬೇಕು... ಎಂದು ಕಿರುಕುಳ ನೀಡುತ್ತಿದ್ದಾನೆ ಎಂದು ವಿವಾಹಿತ ಮಹಿಳೆಯೊಬ್ಬರು ನಗರಸಭೆ ಮಾಜಿ ಸದಸ್ಯನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಈ ಆರೋಪವನ್ನು ಅಲ್ಲಗಳೆದಿರುವ ಇಲ್ಲಿನ ನಗರಸಭೆ ಮಾಜಿ ಸದಸ್ಯ, ಆ ಮಹಿಳೆ ಸೈಟ್ ಖರೀದಿಸುವಾಗ ನನ್ನ ಬಳಿ ಹಣ ಪಡೆದಿದ್ದಳು. ಆ ಹಣವನ್ನು ವಾಪಸ್​ ಕೊಡುವಂತೆ ಕೇಳಿದ್ದಕ್ಕೆ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾಳೆ. ರಕ್ತ ಬರುವಾಗ ಹಾಗೆ ಹೊಡೆದಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

ಹಾವೇರಿ ಹೊರವಲಯದ ನಾಗೆಂದ್ರನಮಟ್ಟಿಯಲ್ಲಿ ಬೀದಿಗೆ ಬಂದ ಇವರಿಬ್ಬರ ಗಲಾಟೆ ಇದೀಗ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಹಾವೇರಿ ಮಹಿಳಾ ಪೊಲೀಸ್​ ಠಾಣೆಯಲ್ಲಿ ಮಹಿಳೆಯು ದೂರು ನೀಡಿದ್ದ ಹಿನ್ನೆಲೆಯಲ್ಲಿ ನಗರಸಭೆ ಮಾಜಿ ಸದಸ್ಯ ಮತ್ತು ದೂರುದಾರರನ್ನು ಕರೆಯಿಸಿ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ಈ ವೇಳೆ ಆರೋಪ-ಪ್ರತ್ಯಾರೋಪ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net