ವೈದ್ಯರ ನಿರ್ಲಕ್ಷ್ಯ: ಗಾಯಾಳುವಿನ ತಲೆಯಲ್ಲಿ ಕಬ್ಬಿಣದ ನಟ್ ಬಿಟ್ಟು ಹಾಗೆಯೇ ಹೊಲಿಗೆ ಹಾಕಿದ್ರು…

head scanning report
Published on

ವೆಲ್ಲೂರು: ಅಪಘಾತದಲ್ಲಿ ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ತಲೆಯಲ್ಲಿ ಕಬ್ಬಿಣದ ನಟ್​ವೊಂದನ್ನು ಹಾಗೆಯೇ ಬಿಟ್ಟು ಹೊಲಿಗೆ ಹಾಕಿರುವ ಆಘಾತಕಾರಿ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ.

ಮಿನ್ನೂರು ನಿವಾಸಿ ಕಾರ್ತಿಕೇಯನ್(46) ಸರ್ಕಾರಿ ಬಸ್​ ಚಾಲಕನಾಗಿದ್ದು, ಸೋಮವಾರ ವೆಲ್ಲೂರಿಗೆ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ಆತನ ತಲೆಗೆ ಗಂಭೀರ ಗಾಯವಾಗಿತ್ತು. ಗಾಯಗೊಂಡ ಚಾಲಕನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ನಂತರ ಹೆಚ್ಚಿನ ಚಿಕಿತ್ಸೆಗೆಂದು ಕಾರ್ತಿಕೇಯನ್​ ಖಾಸಗಿ ಕ್ಲಿನಿಕ್‌ಗೆ ತೆರಳಿದ್ದು. ಅಲ್ಲಿ ತಲೆಯ ಸ್ಕ್ಯಾನಿಂಗ್​ ಮಾಡಿಸಿದ್ದರು. ಈ ವೇಳೆ ತಲೆಬುರುಡೆಯಲ್ಲಿ ಕಬ್ಬಿಣದ ನಟ್​​ ಇರುವುದು ಬೆಳಕಿಗೆ ಬಂದಿದೆ. ಕಾರ್ತಿಕೇಯನ್ ಸಂಬಂಧಿಕರು ತಕ್ಷಣವೇ ಆತನನ್ನು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಸಂಬಂಧಿಸಿದ ವೈದ್ಯಕೀಯ ಸಿಬ್ಬಂದಿಗೆ ಈ ಘಟನೆ ಕುರಿತಾಗಿ ವಿವರಣೆ ಕೇಳಿದ್ದರು. ತಕ್ಷಣವೇ ಆಸ್ಪತ್ರೆಯ ಡೀನ್ ಈ ನಿರ್ಲಕ್ಷ್ಯದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net