ಆಯುರ್ವೇದ ವೈದ್ಯರು ನಡೆಸುವ ಶಸ್ತ್ರಚಿಕಿತ್ಸೆ ಈಗ ಕಾನೂನುಬದ್ಧ !

shalakya
Published on

ಸ್ನಾತಕೋತ್ತರ ಪದವೀಧರ ವೈದ್ಯರಿಗೆ ತರಬೇತಿ | ಅಧಿಸೂಚನೆ ಪ್ರಕಟಿಸಿತು ಸೆಂಟ್ರಲ್ ಕೌನ್ಸಿಲ್ ಆಫ್​ ಇಂಡಿಯನ್ ಮೆಡಿಸಿನ್

ನವದೆಹಲಿ: ಟ್ಯೂಮರ್, ಗ್ಯಾಂಗ್ರೀನ್, ಕ್ಯಾಟರಾಕ್ಟ್ ಸರ್ಜರಿ ಸೇರಿ ಕೆಲವು ಶಸ್ತ್ರಕ್ರಿಯೆಗಳನ್ನು ನಡೆಸುವುದಕ್ಕೆ ಆಯುರ್ವೇದ ವೈದ್ಯರಿಗೆ ಅನುಮತಿ ನೀಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ ಅಧಿಸೂಚನೆ ಪ್ರಕಟಿಸಿದ್ದು, ಆಯ್ದ ವಿಷಯಗಳನ್ನು ಅಧ್ಯಯನ ನಡೆಸಿದ ಸ್ನಾತಕೋತ್ತರ ಪದವೀಧರ ಆಯುರ್ವೇದ ವೈದ್ಯರಿಗೆ ಶಸ್ತ್ರಕ್ರಿಯೆಗೆ ಅನುಮತಿ ನೀಡಿದೆ.

ಸಿಸಿಐಎಂ ಪ್ರಕಟಿಸಿರುವ ಅಧಿಸೂಚನೆ ಬಹುತೇಕ ಸ್ಪಷ್ಟೀಕರಣ ಮಾದರಿಯದ್ದಾಗಿದೆ. ಇದು ಕೆಲವೊಂದು ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದ ನಿಯಮವನ್ನು ಚೌಕಟ್ಟಿನೊಳಗೆ ಸ್ಪಷ್ಟವಾಗಿ ತೋರಿಸಿಕೊಡುವ ಕೆಲಸ ಮಾಡಿದೆ. ಎಲ್ಲ ರೀತಿಯ ಶಸ್ತ್ರಕ್ರಿಯೆಗಳನ್ನೂ ಆಯುರ್ವೇದ ವೈದ್ಯರು ಮಾಡಬಹುದೆಂದಲ್ಲ. ಸ್ನಾತಕೋತ್ತರ ಪದವಿಯಲ್ಲಿ ಶಲ್ಯ ತಂತ್ರ ಮತ್ತು ಶಾಲಾಕ್ಯ ತಂತ್ರ ಕಲಿತವರಿಗಷ್ಟೇ ಅವಕಾಶ. ವೈದ್ಯ ರಾಜೇಶ್ ಕೊಟೇಚಾ, ಆಯುಷ್ ಸಚಿವಾಲಯದ ಕಾರ್ಯದರ್ಶಿ ಆಯುರ್ವೇದ ಸಂಸ್ಥೆಗಳಲ್ಲಿ ಕಳೆದ 20 ವರ್ಷಕ್ಕೂ ಹೆಚ್ಚು ಕಾಲದಿಂದ ಈ ಶಸ್ತ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ.ಈಗ ಸಿಸಿಐಎಂ ಪ್ರಕಟಿಸಿರುವ ಅಧಿಸೂಚನೆ ಈ ಶಸ್ತ್ರಕ್ರಿಯೆಗಳನ್ನು ಕಾನೂನುಬದ್ಧಗೊಳಿಸಿದೆ.ಯಾವ್ಯಾವ ಸರ್ಜರಿಗಳನ್ನು ಮಾಡಬಹುದೆಂಬ ಪಟ್ಟಿಯನ್ನು ಪ್ರಕಟಿಸಿರುವ ಕಾರಣ ಈಗ ಶಸ್ತ್ರಕ್ರಿಯೆ ನಡೆಸುವ ಅರ್ಹ ವೈದ್ಯರು ಈ ನಿಯಮಕ್ಕೆ ಬದ್ಧರಾಗಿ ಕೆಲಸ ಮಾಡಬೇಕಾಗುತ್ತದೆ. ವೈದ್ಯ ಜಯಂತ್ ದೇವಪೂಜಾರಿ, ಸಿಸಿಐಎಂ ಮುಖ್ಯಸ್ಥ

ಇಂಡಿಯನ್​ ಮೆಡಿಸಿನ್ ಸೆಂಟ್ರಲ್ ಕೌನ್ಸಿಲ್​ (ಪೋಸ್ಟ್​ ಗ್ರಾಜುವೇಶನ್​ ಆಯುರ್ವೇದ ಎಜುಕೇಶನ್​) ರೆಗ್ಯುಲೇಶನ್ಸ್ 2016ಕ್ಕೆ ತಿದ್ದುಪಡಿ ತಂದು ಹೊಸ ಅಧಿಸೂಚನೆ ಪ್ರಕಟಿಸಲಾಗಿದೆ. ಪರಿಷ್ಕೃತ ನಿಯಮವನ್ನು ಇಂಡಿಯನ್ ಮೆಡಿಸಿನ್​ ಸೆಂಟ್ರಲ್​ ಕೌನ್ಸಿಲ್​ ಅಮೆಂಡ್​ಮೆಂಟ್ ರೆಗ್ಯಲೇಶನ್ಸ್ 2020 ಎಂದು ಗುರುತಿಸಲ್ಪಡುವ ಸಾಧ್ಯತೆ ಇದೆ.

ಶಸ್ತ್ರಚಿಕಿತ್ಸೆ ನಡೆಸೋದಕ್ಕೆ ಅರ್ಹತೆ: ಅಧಿಸೂಚನೆ ಪ್ರಕಾರ, ಸ್ನಾತಕೋತ್ತರ ಪದವಿಯಲ್ಲಿ ಶಲ್ಯ ತಂತ್ರ ಮತ್ತಿ ಶಾಲಾಕ್ಯ ತಂತ್ರ ಅಭ್ಯಾಸ ಮಾಡಿ, ಸ್ವತಂತ್ರವಾಗಿ ಅದನ್ನು ನಿರ್ವಹಿಸಬಲ್ಲವರಿಗಷ್ಟೇ ಸ್ನಾತಕೋತ್ತರ ಪದವಿ ವ್ಯಾಸಂಗ ಪೂರ್ಣಗೊಳಿಸಿದ ನಂತರ ಶಸ್ತ್ರಕ್ರಿಯೆ ನಡೆಸುವುದಕ್ಕೆ ಅವಕಾಶವಿದೆ. ಇಂಡಿಯನ್​ ಮೆಡಿಸಿನ್ ಸೆಂಟ್ರಲ್ ಕೌನ್ಸಿಲ್​ (ಪೋಸ್ಟ್​ ಗ್ರಾಜುವೇಶನ್​ ಆಯುರ್ವೇದ ಎಜುಕೇಶನ್​) ರೆಗ್ಯುಲೇಶನ್ಸ್ 2016ರ 10ನೇ ನಿಯಮದ 8 ನೇ ಉಪನಿಯಮದಲ್ಲಿ ಇದನ್ನು ಉಲ್ಲೇಖಿಸಲಾಗಿದೆ.

ನವೆಂಬರ್ 20ರಂದು ಪ್ರಕಟಿಸಿದ ಗಜೆಟ್ ಅಧಿಸೂಚನೆ ಪ್ರಕಾರ 39 ಜನರಲ್ ಸರ್ಜರಿಗಳು ಮತ್ತು ಕಣ್ಣು, ಕವಿ, ಮೂಗು, ಗಂಟಲು ಸೇರಿ ವಿವಿಧ ರೀತಿ 19 ಶಸ್ತ್ರಚಿಕಿತ್ಸೆ ನಡೆಸುವುದಕ್ಕೆ ಅರ್ಹತೆ ಪಡೆದ ಆಯುರ್ವೇದ ವೈದ್ಯರು ಅರ್ಹರಿದ್ದಾರೆ. ಅವರು ಅದನ್ನು ನೆರವೇರಿಸಬಹುದು.ಫಂಕ್ಷನಲ್ ಎಂಡೋಸ್ಕೋಪಿಕ್ ಸೈನಸ್ ಸರ್ಜರಿ,ಕ್ಯಾಟರಾಕ್ಟ್ ಸರ್ಜರಿ, ಸ್ಕ್ವಿಂಟ್ ಸರ್ಜರಿ, ಹೊಟ್ಟೆಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳನ್ನು ನಡೆಸಬಹುದಾಗಿದೆ. ಪರಿಷ್ಕೃತ ನಿಯಮ ಗಮನಿಸಲು http://www.bareactslive.com/ACA/act3306.htm (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net