More

    ‘ದಯಮಾಡಿ ನನ್ನ ಫೋಟೋಗಳನೆಲ್ಲ ಡಿಲಿಟ್ ಮಾಡಿ’; ದಂಗಲ್​ ನಟಿ ಝೈರಾ ವಸೀಮ್​ ಮನವಿ

    ಮುಂಬೈ: ದಂಗಲ್​ ಮೂಲಕ ಬಾಲಿವುಡ್​ನಲ್ಲಿ ಹೆಸರು ಮಾಡಿದ ನಟಿ ಝೈರಾ ವಸೀಮ್​, ಕಳೆದ ವರ್ಷ ಅಚ್ಚರಿಯ ಹೇಳಿಕೆ ನೀಡಿ, ಇನ್ನು ಮುಂದೆ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಇದೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ‘ದಯಮಾಡಿ ನನ್ನ ಫೋಟೋಗಳನ್ನೆಲ್ಲ ಡಿಲಿಟ್​ ಮಾಡಿ’ ಎಂದು ವಿನಂತಿ ಮಾಡಿದ್ದಾರೆ.

    ಇದನ್ನೂ ಓದಿ:  ‘ಐದು ವರ್ಷಗಳ ಹಿಂದೆಯೇ ಅಂಡಾಣು ಫ್ರೀಜ್​ ಮಾಡಿದ್ದೇನೆ- ಬೇಕೆಂದಾಗ ಮಗು ಪಡೆಯುವೆ’

    ‘ಈ ವರೆಗೂ ನೀವು ತೋರಿಸುತ್ತಿರುವ ಪ್ರೀತಿಗೆ ನಾನು ಧನ್ಯ. ಸದಾ ನನಗೆ ಬೆಂಬಲವಾಗಿ ನಿಂತಿದ್ದ ನಿಮಗೆಲ್ಲ ನನ್ನ ಕಡೆಯಿಂದ ಕೃತಜ್ಱತೆ. ಇಷ್ಟೆಲ್ಲ ಕಾಳಜಿ, ಪ್ರೀತಿ ತೋರುವ ನಿಮ್ಮಿಂದ ನನಗೊಂದು ಸಹಾಯವಾಗಬೇಕಿದೆ. ಅದೇನೆಂದರೆ, ನಿಮ್ಮ ಬಳಿ ಇರುವ ನನ್ನ ಫೋಟೋಗಳನ್ನು ಮತ್ತು ಫ್ಯಾನ್​ ಪೇಜ್​ಗಳಲ್ಲಿರುವ ಫೋಟೋಗಳನ್ನು ಅಳಿಸಿಹಾಕಿ’ ಎಂದಿದ್ದಾರೆ.

    ‘ದಯಮಾಡಿ ನನ್ನ ಫೋಟೋಗಳನೆಲ್ಲ ಡಿಲಿಟ್ ಮಾಡಿ’; ದಂಗಲ್​ ನಟಿ ಝೈರಾ ವಸೀಮ್​ ಮನವಿ ‘ದಯಮಾಡಿ ನನ್ನ ಫೋಟೋಗಳನೆಲ್ಲ ಡಿಲಿಟ್ ಮಾಡಿ’; ದಂಗಲ್​ ನಟಿ ಝೈರಾ ವಸೀಮ್​ ಮನವಿ

    ‘ಹಾಗೇ ಅಳಿಸಿ ಹಾಕುವುದು ಅಷ್ಟು ಸುಲಭದ ಕೆಲಸವಲ್ಲ. ಆದರೂ ನನ್ನ ಈ ಮನವಿಗಾದರೂ ಒಂದಷ್ಟು ಫೋಟೋಗಳು ಡಿಲಿಟ್​ ಆಗಲಿವೆ ಎಂಬ ನಂಬಿಕೆ ಇದೆ. ಅದರ ಶೇರಿಂಗ್​ ಪ್ರಮಾಣವೂ ಕಡಿಮೆ ಆಗಲಿದೆ ಎಂದು ಭಾವಿಸಿದ್ದೇನೆ. ಈವರೆಗೂ ನನಗೆ ಬೆಂಬಲಿಸಿದಂತೆ ಈ ವಿಚಾರಕ್ಕೂ ಕೈ ಜೋಡಿಸುತ್ತೀರಿ ಎಂದು ನಂಬಿದ್ದೇನೆ. ಜೀವನದಲ್ಲಿ ಹೊಸ ಮನ್ವಂತರದತ್ತ ಹೊರಳುತ್ತಿದ್ದೇನೆ. ಅದಕ್ಕೆ ನಿಮ್ಮ ಸಹಕಾರವಿರಲಿ’ ಎಂದು ಝೈರಾ ಕೋರಿದ್ದಾರೆ.

    ಇದನ್ನೂ ಓದಿ: ಒಂದೇ ದಿನ 113 ಬಾರಿ ಬಿಡುಗಡೆಯಾದ ರಾಜಕುಮಾರ ಪಂಚಪದಿ

    ಅಂದಹಾಗೆ, 2019ರಲ್ಲಿ ದಿ ಸ್ಕೈ ಈಸ್ ಪಿಂಕ್ ಚಿತ್ರದ ಬಳಿಕ ಝೈರಾ ಬೇರಾವ ಸಿನಿಮಾ ಒಪ್ಪಿಕೊಂಡಿಲ್ಲ. ಇಸ್ಲಾಂ ಧರ್ಮದ ಕೆಲಸಗಳಲ್ಲಿ ಝೈರಾ ತೊಡಗಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇಸ್ಲಾಂ ಧರ್ಮ ಪ್ರಚಾರಕರಾಗಿ ಗುರುತಿಸಿಕೊಂಡಿದ್ದು, ಅಲ್ಲಿನ ತಮ್ಮ ಎಲ್ಲ ಫೋಟೋಗಳನ್ನು ಡಿಲಿಟ್​ ಮಾಡಿದ್ದಾರೆ.  (ಏಜೆನ್ಸೀಸ್​)

    ‘ಕೇಸ್ ಹಿಂಪಡೆಯಿರಿ, ಇಲ್ಲದಿದ್ದಲ್ಲಿ ನಾನೂ ಪ್ರಕರಣ ದಾಖಲಿಸುವೆ’; ಅಕ್ಷಯ್​ ವಿರುದ್ಧ ಯೂಟ್ಯೂಬರ್ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts