ಸ್ವಾತಂತ್ರ್ಯ ನಿರಂತರ ಹೋರಾಟದ ಫಲ

15-MDG-3P1 INDEPENDENCE
ತಳವಾರ ಗ್ರಾಮದ ಸರ್ಕಾರಿ ಹಿರಿಯ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕ ಕಳಸೇಗೌಡ ಮಾತನಾಡಿದರು. ಅಣ್ಣಪ್ಪ, ಮಂಜುನಾಥ ಗೌಡ, ಅಣ್ಣೇಗೌಡ, ನಯನ ತಳವಾರ ಇತರರಿದ್ದರು.
Published on

ಮೂಡಿಗೆರೆ: ದೇಶದ ಪ್ರತಿ ಗ್ರಾಮದಿಂದ ನಡೆದ ಹೋರಾಟದಿಂದ ಸ್ವಾತಂತ್ರ್ಯ ಸಿಗುವಂತೆ ಮಾಡಿದೆ ಎಂದು ನಿವೃತ್ತ ಶಿಕ್ಷಕ ಕಳಸೇಗೌಡ ತಿಳಿಸಿದರು. ತಳವಾರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ದೇಶದ ವಿವಿಧೆಡೆ ಹರತಾಳ, ಚಳವಳಿ, ಸತ್ಯಾಗ್ರಹ ನಡೆಸುವ ಮೂಲಕ ಬ್ರಿಟಿಷರನ್ನು ಭಾರತದಿಂದ ಹೊರಹಾಕಿ ಸ್ವಾತಂತ್ರ್ಯ ಗಳಿಸಲಾಯಿತು. ಸ್ವಾತಂತ್ರ್ಯ ನಮಗೆ ದೊರಕಿದ್ದರಿಂದ ಆಧುನಿಕ ಭಾರತವಾಗಿ ಪರಿವರ್ತನೆಯಾಗಿದೆ. ನಮ್ಮತನ ಉಳಿಸಿಕೊಳ್ಳಲು ಸ್ವಾತಂತ್ರೃ ನಮಗೆ ನೆರವಾಗಿದೆ ಎಂದು ತಿಳಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಅಣ್ಣಪ್ಪ, ಗ್ರಾಮದ ಪ್ರಮುಖರಾದ ಅಣ್ಣೇಗೌಡ, ಮಂಜುನಾಥ ಗೌಡ, ನಯನ ತಳವಾರ ಹಾಗೂ ಶಿಕ್ಷಕರು, ಗ್ರಾಮಸ್ಥರು ಭಾಗವಹಿಸಿದ್ದರು.
ಬೆಳೆಗಾರರ ಸಂಘದಿಂದ ಧ್ವಜಾರೋಹಣ: ತಾಲೂಕು ಬೆಳೆಗಾರರ ಹಾಗೂ ಟೈಲರ್ ಸಂಘದಿಂದ ಬೆಳೆಗಾರರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಧ್ವಜಾರೋಹಣ ನೆರವೇರಿಸಿದರು. ಶಿವೇಗೌಡ, ಬಿ.ಎಸ್.ಜಯರಾಮ್, ಬಸವರಾಜ್, ಪೂರ್ಣೇಶ್, ಉಮಾ, ತೀರ್ಥ, ಪ್ರದೀಪ್, ರೇವಣ್ಣ ಗೌಡ, ಪ್ರಕಾಶ್, ಸತೀಶ್, ಗಿರೀಶ್, ಕೇಶವ, ದಯಾಕರ, ಗೋಪಾಲ, ಷಣ್ಮುಖಾನಂದ, ಮಂಜುಳಾ, ಬ್ರಿಜೇಶ್, ಮೋಹನ್ ಲಾಲ್, ನರಸಿಂಹ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net