ಕ್ಲಬ್‌ ಮೆಂಬರ್​ಗಳಿಗೆ ಗುಡ್ ನ್ಯೂಸ್! ಮದ್ಯ ಪಾರ್ಸಲ್‌ಗೆ ಅವಕಾಶ

drinks
Published on

ಬೆಂಗಳೂರು: ರಾಜ್ಯದಲ್ಲಿನ ನೊಂದಾಯಿತ ಕ್ಲಬ್‌ಗಳಲ್ಲಿ ಸದಸ್ಯರು ಮದ್ಯವನ್ನು ಪಾರ್ಸಲ್ ತೆಗೆದುಕೊಂಡು ಹೋಗಲು ಸರ್ಕಾರ ಅನುಮತಿ ನೀಡಿದೆ.

ಕೋವಿಡ್‌ ಲಾಕ್‌ಡೌನ್ ಜಾರಿಗೊಳಿಸಿದ ದಿನದಿಂದ ಬಾರ್‌ಗಳಿಂದ ಮದ್ಯದ ಬಾಟಲಿಗಳನ್ನು ಮನೆಗೆ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶವಿತ್ತು. ಆದರೆ, ಕ್ಲಬ್‌ಗಳಿಗೆ ಹಣ ಪಾವತಿಸಿ ಸದಸ್ಯತ್ವ ಪಡೆದು ರಿಯಾಯಿತಿ ದರದಲ್ಲಿ ಆಹಾರ ಮತ್ತು ಮದ್ಯ ಸೇವನೆಗೆ ಅವಕಾಶ ಪಡೆದವರಿಗೆ ತೊಂದರೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಲಬ್‌ಗಳಿಂದ ಮದ್ಯವನ್ನು ಪಾರ್ಸೆಲ್ ಕೊಂಡೊಯ್ಯಲು ಅವಕಾಶ ನೀಡಿದೆ.

ಬೆಂಗಳೂರಿನಲ್ಲಿ ಕಚೇರಿಗಳನ್ನು ಹೊಂದಿರುವ ಕೇಂದ್ರ ಸರ್ಕಾರದ ಬಾಹ್ಯಾಕಾಶ ಮತ್ತು ಇದರ ಸಂಬಂಧಿತ ಕೇಂದ್ರಗಳನ್ನು ಶೇ.50 ಸಿಬ್ಬಂದಿಯೊಂದಿಗೆ ತೆರಯಲು ಅವಕಾಶ ನೀಡಿದೆ. ಜತೆಗೆ, ಪ್ರಿನ್ಸಿಪಲ್ ಅಕೌಂಟೆಂಟ್ ಜನರಲ್ ಕಚೇರಿ ಮತ್ತು ಅದರ ಶಾಖೆಗಳನ್ನು ಶೇ.50 ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಈ ಕಚೇರಿಗಳಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸುವಂತೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net