ನ.1 ರಿಂದ ಬ್ಯಾಂಕ್ ಗ್ರಾಹಕರಿಗೆ ಗುಡ್​ನ್ಯೂಸ್: ಬ್ಯಾಂಕಿಂಗ್​​ ನಿಯಮಗಳಲ್ಲಿ ಮಹತ್ತರ ಬದಲಾವಣೆ ಮಾಡಿದ RBI!

Bbau (49)
Published on

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಡಿ ಬ್ಯಾಂಕಿಂಗ್ ಕಾನೂನುಗಳ (ಸುಧಾರಣೆ) ಕಾಯ್ದೆ 2025ರ ಪ್ರಕಾರ, 2025ರ ನವೆಂಬರ್ 1 ರಿಂದ ಬ್ಯಾಂಕ್ ಖಾತೆಗಳು ಮತ್ತು ಲಾಕರ್‌ಗಳಿಗೆ ಗ್ರಾಹಕರು ಒಂದೇ ಸಮಯದಲ್ಲಿ ಹತ್ತಿರದ 4 ನಾಮಿನಿಗಳನ್ನು ನೇಮಿಸಬಹುದು.

ಹೌದು, ಈ ಹಿಂದಿನ ನಿಯಮದಲ್ಲಿ ಒಬ್ಬ ನಾಮಿನಿಯನ್ನು ಮಾತ್ರ ಅನುಮತಿಸುತ್ತಿದ್ದದ್ದಕ್ಕಿಂತ ಇದೀಗ ಮೂರು ನಾಮಿನಿಗಳನ್ನು ಹೆಸರುಗಳನ್ನು ನೇಮಿಸಬಹುದಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇದು ದೊಡ್ಡ ಬದಲಾವಣೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಗ್ರಾಹಕರು ಏಕಕಾಲದಲ್ಲಿ ಅಥವಾ ಅನುಕ್ರಮವಾಗಿ ನಾಲ್ಕು ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಬಹುದು. ಇದರಿಂದಾಗಿ ಠೇವಣಿದಾರರು ಮತ್ತು ಅವರ ನಾಮನಿರ್ದೇಶಿತರಿಗೆ ಕ್ಲೈಮ್ ಇತ್ಯರ್ಥವನ್ನು ಸರಳಗೊಳಿಸಬಹುದು. ಠೇವಣಿದಾರರು ತಮ್ಮ ಇಚ್ಛೆಯಂತೆ ಏಕಕಾಲದಲ್ಲಿ ಅಥವಾ ಸತತ ನಾಮನಿರ್ದೇಶನಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹಣಕಾಸು ಸಚಿವಾಲಯದ ಹೇಳಿಕೆ ಗುರುವಾರ ತಿಳಿಸಿದೆ.

ಸುರಕ್ಷಿತ(ಲಾಕರ್​) ಕಸ್ಟಡಿಯಲ್ಲಿರುವ ವಸ್ತುಗಳು ಮತ್ತು ಸುರಕ್ಷತಾ ಲಾಕರ್‌ಗಳ ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ, ಸತತ ನಾಮನಿರ್ದೇಶನಗಳನ್ನು ಮಾತ್ರ ಅನುಮತಿಸಲಾಗಿದೆ. ಠೇವಣಿದಾರರು ನಾಲ್ಕು ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಬಹುದು ಮತ್ತು ಪ್ರತಿ ನಾಮಿನಿಗೆ ಅರ್ಹತೆಯ ಪಾಲು ಅಥವಾ ಶೇಕಡಾವಾರು ಪ್ರಮಾಣವನ್ನು ನಿರ್ದಿಷ್ಟಪಡಿಸಬಹುದು. ಒಟ್ಟು ಮೊತ್ತವು 100 ಪ್ರತಿಶತಕ್ಕೆ ಸಮನಾಗಿರುತ್ತದೆ ಮತ್ತು ಎಲ್ಲಾ ನಾಮಿನಿಗಳಲ್ಲಿ ಪಾರದರ್ಶಕ ವಿತರಣೆಯನ್ನು ಸಕ್ರಿಯಗೊಳಿಸುತ್ತದೆ ಸಚಿವಾಲಯ ಹೇಳಿದೆ.

ಮುಖ್ಯ ಅಂಶಗಳು

ನಾಮಿನಿಗಳ ಸಂಖ್ಯೆ: ಡಿಪಾಸಿಟ್ ಖಾತೆಗಳು, ಸೇಫ್ ಕಸ್ಟಡಿ ಮತ್ತು ಲಾಕರ್‌ಗಳಿಗೆ ಗರಿಷ್ಠ 4 ನಾಮಿನಿಗಳನ್ನು ಆಯ್ಕೆ ಮಾಡಬಹುದು.

ಹಂತಹಂತದ ವಿತರಣೆ: ಖಾತೆದಾರರ ಮರಣದ ನಂತರ, ಮೊದಲ ನಾಮಿನಿ ಹಣ ಅಥವಾ ಸರಕುಗಳನ್ನು ಪಡೆದುಕೊಂಡ ನಂತರ, ಉಳಿದವುಗಳನ್ನು ನಂತರದ ನಾಮಿನಿಗಳಿಗೆ ವಿತರಿಸಬಹುದು. ಇದರಿಂದ ಕುಟುಂಬದ ಸದಸ್ಯರ ನಡುವೆ ಸುಗಮ ವಿತರಣೆ ಸಾಧ್ಯ.

ಪ್ರಯೋಜನಗಳು: ಇದು ಕರೆಟಕ್ ಸೆಟಲ್‌ಮೆಂಟ್ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ಕುಟುಂಬದ ಆಸ್ತಿಗಳ ವಿತರಣೆಯಲ್ಲಿ ಸುಲಭತೆ ತರುತ್ತದೆ.

ಈ ಬದಲಾವಣೆಯನ್ನು ಜಾರಿಗೊಳಿಸಲು ನಿಮ್ಮ ಬ್ಯಾಂಕ್‌ಗೆ ಸಂಪರ್ಕಿಸಿ, ಅಗತ್ಯ ಫಾರ್ಮ್‌ಗಳನ್ನು ಭರ್ತಿ ಮಾಡಿ. ಹೆಚ್ಚಿನ ವಿವರಗಳಿಗೆ RBI ಅಧಿಕೃತ ವೆಬ್‌ಸೈಟ್ ಪರಿಶೀಲಿಸಿ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net