ಬಿಗ್ ಬಾಸ್​ 12ರ ಸ್ಪರ್ಧಿ ಅಶ್ವಿನಿ ಗೌಡಗೆ ಕಾನೂನು ಸಂಕಷ್ಟ! ಪೊಲೀಸ್​ ಠಾಣೆಯಲ್ಲಿ ದೂರು ದಾಖಲು! Ashwini Gowda

ವಿಜಯವಾಣಿ (95)
Published on

ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್​ ಸೀಸನ್​ 12ರ ಸ್ಪರ್ಧಿ ಅಶ್ವಿನಿ ಗೌಡ (Ashwini Gowda) ವಿರುದ್ಧ ಇದೀಗ ಬೆಂಗಳೂರಿನ ಬಿಡದಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದ ವಾರ ಬಿಗ್ ಬಾಸ್​ ಮನೆಯಲ್ಲಿ ಮತ್ತೊಬ್ಬ ಸ್ಪರ್ಧಿ ರಕ್ಷಿತಾ ವಿರುದ್ಧ ಅಶ್ವಿನಿ ಆಡಿದ ಮಾತುಗಳನ್ನು ಗಮನಿಸಿ, ಪ್ರಶಾಂತ್ ಮೆಥಲ್ ಎಂಬುವವರು ದೂರು ದಾಖಲಿಸಿದ್ದಾರೆ. ಅಶ್ವಿನಿ ಗೌಡ ಅವರು ರಕ್ಷಿತಾಗೆ ಕೆಟ್ಟ ಪದ ಬಳಕೆ ಮಾಡಿದ್ದಾರೆ. ಇದು ಜಾತಿ ನಿಂದನೆ ಪದವಾಗಿದೆ ಎಂದು ಆರೋಪಿಸಿದ್ದಾರೆ.

ಕೋಟ್ಯಂತರ ಕನ್ನಡಿಗರು ನೋಡುವ ಬಿಗ್ ಬಾಸ್​ ಕಾರ್ಯಕ್ರಮದಲ್ಲಿ ಅವರಾಡಿರುವ ಮಾತನ್ನು ಕಟ್​ ಮಾಡದೆಯೇ, ಆಯೋಜಕರು ಪ್ರಸಾರ ಮಾಡಿದ್ದಾರೆ. ಈ ಕುರಿತು ಅಶ್ವಿನಿ ಗೌಡ ಹಾಗೂ ಆಯೋಜಕರು ಸ್ಪಷ್ಟನೆ ಕೊಡಬೇಕು ಎಂದು ಹೈಕೋರ್ಟ್​ ವಕೀಲ ಪ್ರಶಾಂತ್​ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

'She is a S, ಅ Category ನಾನಲ್ಲ!

ದೂರಿನ ಪತ್ರದಲ್ಲಿ, "ಈ ಮೂಲಕ ತಮ್ಮಲ್ಲಿ ತಿಳಿಸಲು ಬಯಸುವುದು ಏನಂದರೆ, ಈ ವರ್ಷ ಜಾಲಿವುಡ್ ಸುಡಿಯೋದಲ್ಲಿ ನಡೀತಿರೋ ಬಿಗ್‌ಬಾಸ್ 12 ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಸ್ಪರ್ಧಿಯಾದ ಅಶ್ವಿನಿ ಗೌಡ ಅವರು, ರಕ್ಷಿತಾ ಎಂಬುವರಿಗೆ ‘She is S, ಆ Category ನಾನಲ್ಲ' ಎಂಬ ಪದ ಬಳಕೆಯನ್ನು ಮಾಡಿರುತ್ತಾರೆ. ಇದು ಜಾತಿ ನಿಂದನೆ ಮತ್ತು ವ್ಯಕ್ತಿತ್ವದ ನಿಂದನೆ ಮಾಡುವಂತಹ ವಿಷಯವಾಗಿದೆ. ಈ ಸಮಾಜದಲ್ಲಿ ಎಲ್ಲರೂ ಒಂದೇ. ಯಾವ ಜಾತಿ ಅಥವಾ ಬೇದವನ್ನು ಹರಡುವಂತಿಲ್ಲ" ಎಂದಿದ್ದಾರೆ.

"ಅಶ್ವಿನಿ ಅವರಾಡಿದ ಮಾತನ್ನು ತೆಗೆಯದೆ, ತಮ್ಮ ಟಿಆರ್​ಪಿ ಹೆಚ್ಚಾಗಲು ಇದನ್ನು ಪ್ರಸಾರ ಮಾಡಿರುತ್ತಾರೆ. ಇದರಿಂದ ನಾವು ಸಮಾಜಕ್ಕೆ ಒಂದು ಕೆಟ್ಟ ಸಂದೇಶವನ್ನು ನೀಡಿದಂತಾಗುತ್ತದೆ. ಆದುದರಿಂದ, ತಾವುಗಳು ಸ್ಪರ್ಧಿ ಅಶ್ವಿನಿ ಗೌಡ ಹಾಗೂ ಬಿಜಿನೆಸ್​ ಹೆಡ್​ ಪ್ರಶಾಂತ್ ನಾಯಕ್​, ಸುಷ್ಮಾ (ಕ್ಲಸ್ಟರ್ ಹೆಡ್​) ಮತ್ತು ಪ್ರಕಾಶ್​ (ನಿರ್ದೇಶಕರು) ವಿರುದ್ಧ ದೂರನ್ನು ದಾಖಲಿಸಿ, ಕಾನೂನು ರೀತಿ ಕ್ರಮವನ್ನು ಜರುಗಿಸಿ" ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net