

ನವದೆಹಲಿ: ದೀಪಾವಳಿ ಹಬ್ಬದ ಕೊಡುಗೆಯೊಂದಿಗೆ ಬಿಎಸ್ಎನ್ಎಲ್ (BSNL) ಹೊಸ ಗ್ರಾಹಕರಿಗೆ ಅದ್ಭುತ ಅವಕಾಶ ನೀಡಿದೆ.
ಹೌದು, ಕೇವಲ 1 ರೂಪಾಯಿಯಲ್ಲಿ ನೀವು ಒಂದು ತಿಂಗಳು (30 ದಿನಗಳು) ಉಚಿತ ಸಿಮ್ ಕಾರ್ಡ್ ಪಡೆಯಬಹುದು. ದಿನಕ್ಕೆ 2GB 4G ಡೇಟಾ ಮತ್ತು ದಿನಕ್ಕೆ 100 SMSಗಳು ಸಿಗುತ್ತವೆ. ಈ ಆಫರ್ "ದೀಪಾವಳಿ ಬೊನಾಂಜಾ" ಎಂದು ಕರೆಯಲಾಗಿದ್ದು, 2025ರ ಅಕ್ಟೋಬರ್ 15ರಿಂದ ನವೆಂಬರ್ 15ರವರೆಗೆ ಮಾತ್ರ ಅಂದರೆ ಒಂದು ತಿಂಗಳವರೆಗೆ ಈ ಆಫರ್ ಇರುತ್ತದೆ.
ದರ: 1 ರೂ. (ಟೋಕನ್ ಚಾರ್ಜ್ ಆಗಿ).
ಸಿಮ್ ಕಾರ್ಡ್: ಉಚಿತ ಪ್ರೀಪೇಯ್ಡ್ ಸಿಮ್ (ಹೊಸ ಗ್ರಾಹಕರಿಗೆ ಮಾತ್ರ).
ಸೇವೆಗಳು: ಎಲ್ಲಾ ನೆಟ್ವರ್ಕ್ಗಳಿಗೆ
ದಿನಕ್ಕೆ 2GB 4G ಡೇಟಾ (2GB ಮೀರಿದರೆ 40kbps ವೇಗಕ್ಕೆ ಕಡಿಮೆಯಾಗುತ್ತದೆ).
ದಿನಕ್ಕೆ 100 SMSಗಳು.
ವ್ಯಾಲಿಡಿಟಿ: 30 ದಿನಗಳು.
ಹೊಸ ಗ್ರಾಹಕರಿಗೆ ಮಾತ್ರ (ಪೋರ್ಟ್-ಇನ್ ಅಲ್ಲ, ಹೊಸ ಸಿಮ್).
ಬಿಎಸ್ಎನ್ಎಲ್ ಸ್ಟೋರ್ ಅಥವಾ ಅಧಿಕೃತ ಡೀಲರ್ಗಳಿಗೆ ಭೇಟಿ ನೀಡಿ, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅಥವಾ ಇತರ ಗುರುತಿನ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ. ಆನ್ಲೈನ್ನಲ್ಲಿ ಲಭ್ಯವಿಲ್ಲ, ಆದರೆ ಸ್ಥಳೀಯ ಸೇವಾ ಕೇಂದ್ರಗಳಲ್ಲಿ ಲಭ್ಯ. ಈ ಆಫರ್ ಬಿಎಸ್ಎನ್ಎಲ್ನ 4G ನೆಟ್ವರ್ಕ್ ಅನ್ನು ವಿಸ್ತರಿಸುವ ಉದ್ದೇಶದಿಂದ ಆರಂಭಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಬಿಎಸ್ಎನ್ಎಲ್ ಅಧಿಕೃತ ವೆಬ್ಸೈಟ್ ಅಥವಾ ಕಸ್ಟಮರ್ ಕೇರ್ (1800-11-2211) ಸಂಪರ್ಕಿಸಿ.(ಏಜೆನ್ಸೀಸ್)