ಗುಡ್‌ಫ್ರೈಡೆ ಪೂರ್ವಭಾವಿ ಗರಿಗಳ ಹಬ್ಬ ಆಚರಣೆ

bhr cjhurch
ಬಾಳೆಹೊನ್ನೂರಿನ ವಿಜಯಮಾತೆ ಚರ್ಚ್‌ನಲ್ಲಿ ಗುಡ್‌ಫ್ರೈಡೆ ಪೂರ್ವಭಾವಿಯಾಗಿ ಗರಿಗಳ ಹಬ್ಬವನ್ನು ಆಚರಿಸಲಾಯಿತು.
Published on

ಬಾಳೆಹೊನ್ನೂರು: ಪಟ್ಟಣದ ವಿಜಯಮಾತೆ ಚರ್ಚ್‌ನಲ್ಲಿ ಮಾ.29ರಂದು ನಡೆಯಲಿರುವ ಗುಡ್‌ಫ್ರೈಡೆ ಪೂರ್ವಭಾವಿಯಾಗಿ ಗರಿಗಳ ಹಬ್ಬವನ್ನು ಭಾನುವಾರ ಆಚರಿಸಲಾಯಿತು. ಗರಿಗಳ ಹಬ್ಬದ ಅಂಗವಾಗಿ ಕ್ರೈಸ್ತರು ಧರ್ಮಗುರುಗಳು ಆಶೀರ್ವದಿಸಿ ನೀಡಿದ ಗರಿಗಳನ್ನು ಹಿಡಿದು ಏಸುಕ್ರಿಸ್ತರ ಜಯಘೋಷಗಳೊಂದಿಗೆ ಮೆರವಣಿಗೆ ನಡೆಸಿದರು. ವಿಜಯಮಾತೆ ಚರ್ಚ್‌ನ ಧರ್ಮಗುರು ಹೆನ್ರಿ ಪೌಲ್ ಡಿಸೋಜಾ ಆರ್ಶೀವಚನ ನೀಡಿ, ಕ್ರೈಸ್ತರು ಗುಡ್‌ಫ್ರೈಡೆಯನ್ನು ವಿಶೇಷವಾಗಿ ಏಸುಕ್ರಿಸ್ತರ ಸ್ಮರಣೆಯೊಂದಿಗೆ ಆಚರಿಸಬೇಕು. ಅವರು ನೀಡಿದ ಸಂದೇಶದಂತೆ ಪವಿತ್ರ ವಾರದ ಸಂದರ್ಭದಲ್ಲಿ ಜಾತಿ, ಮತ ಬೇಧವಿಲ್ಲದೆ ಬಡವರು-ದೀನದಲಿತರಿಗೆ ಸಹಾಯಹಸ್ತವನ್ನು ಚಾಚಬೇಕು ಎಂದರು. ಗರಿಗಳ ಹಬ್ಬದ ಧಾರ್ಮಿಕ ವಿಧಾನಗಳಲ್ಲಿ ಚರ್ಚ್ ಸಮಿತಿ ಸದಸ್ಯರು ಸೇರಿದಂತೆ ಭಕ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net