ಹೋಳಿ ಹಬ್ಬದ ಹಿನ್ನೆಲೆ ಈ ಸಿಹಿತಿನಿಸಿಗೆ ಹೆಚ್ಚಾಯ್ತು ಭಾರೀ ಬೇಡಿಕೆ; ಇದರ ಬೆಲೆ ಕೇಳಿದ್ರೆ ಹುಬ್ಬೇರೋದು ಖಚಿತ

Gujia
Published on

ಲಖನೌ: ಹೋಳಿ ಹಬ್ಬ (Holi Festival) ಸಮೀಪಿಸುತ್ತಿದ್ದಂತೆ ದೇಶಾದ್ಯಂತ ಸಂಭ್ರಮ ಮನೆ ಮಾಡಿದ್ದು, ಉತ್ತರಭಾರತದಲ್ಲಿ ಹೋಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ ಎಂದರೆ ತಪ್ಪಾಗಲಾರದು. ಹೋಳಿ ಹಬ್ಬದ ಸಮಯದಲ್ಲಿ ಸಿಹಿ ತಿಂಡಿಗೆ ಬೇಡಿಕೆ ಹೆಚ್ಚಾಗಿದ್ದು, ಇದೀಗ ಉತ್ತರಪ್ರದೇಶದ ಬೇಕರಿಯೊಂದರಲ್ಲಿ ಮಾಡಲಾಗುವ ಸಿಹಿ ತಿನಿಸಿಗೆ ಬೇಡಿಕೆ ಹೆಚ್ಚಾಗಿದ್ದು, ಪ್ರತಿ ಕೆಜಿಗೆ 50 ಸಾವಿರ ರೂ. ಹಣ ಕೊಟ್ಟು ಗ್ರಾಹಕರು ತಿನಿಸನ್ನು ಖರೀದಿಸುತ್ತಿದ್ದಾರೆ.

ಉತ್ತರಪ್ರದೇಶದ ಗೊಂಡಾ ಜಿಲ್ಲೆಯ ಬೇಕರಿ ಒಂದರಲ್ಲಿ ಗುಜಿಯಾವನ್ನು (ಕರ್ಜಿಕಾಯಿ ಆಕಾರದ ಸಿಹಿತಿನಿಸು) ಚಿನ್ನದಿಂದ ಮಾಡಲಾಗಿದ್ದು, ಇದನ್ನು ಖರೀದಿಸಲು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಿಹಿ ತಿನಿಸನ್ನು ಖರೀದಿಸುತ್ತಿದ್ದು, ಈ ಬಗ್ಗೆ ಬೇಕರಿ ಮಾಲೀಕರಾದ ಶಿವಕಾಂತ್ ಚತುರ್ವೇದಿ ಅವರು ಮಾತನಾಡಿದ್ದಾರೆ.

ಈ ಸ್ಪೆಷಲ್ ಗುಜಿಯಾ ಮೇಲೆ 24 ಕ್ಯಾರೆಟ್ ಚಿನ್ನದ ಲೇಪನವಿದ್ದು, ಡ್ರೈಫ್ರೂಟ್ಸ್​ ಹಾಕಿ ಮಾಡಲಾಗಿದೆ. ಸಾಮಾನ್ಯವಾಗಿ ನಾವು ಗುಜಿಯಾವನ್ನು ಹಾಲಿನ ಕೋವಾ, ಸೀಡ್ಸ್​ ಹಾಗೂ ಡ್ರೈ ಫ್ರೂಟ್ಸ್ ಹಾಕಿ ತಯಾರಿಸುತ್ತೇವೆ. ಆದರೆ, ಈ ಬಾರಿ ತಯಾರಿಸಿರುವ ಗುಜಿಯಾದ ಮೇಲೆ ಚಿನ್ನದ ಲೇಪನ ಮಾಡಲಾಗಿದ್ದು, ಹೊಂಬಣ್ಣದಿಂದ ಹೊಳೆಯುತ್ತಿದೆ. ಹೀಗಾಗಿ ಇದು ವಿಶೇಷವಾಗಿದ್ದು, ದುಬಾರಿ ಬೆಲೆಗೆ ಮಾರಟವಾಗುತ್ತಿದೆ.

ಗುಜಿಯಾವನ್ನು 50 ಸಾವಿರ ರೂಪಾಯಿ ಕೆಜಿಗೆ ಮಾರಾಟ ಮಾಡಲಾಗುತ್ತಿದ್ದು, ಒಂದು ಪೀಸ್​ಗೆ 1,300 ರೂ. ಬೆಲೆ ನಿಗದಿಪಡಿಸಲಾಗಿದೆ. ಇದಲ್ಲದೆ ಲಖನೌನ ಬೇಕರಿಯೊಂದರಲ್ಲಿ 25 ಕೆಜಿ ತೂಕದ ಆರು ಇಂಚಿನ  ಗುಜಿಯಾವೊಂದನ್ನು ತಯಾರಿಸಲಾಗಿದ್ದು, ಹೊಸ ದಾಖಲೆ ನಿರ್ಮಿಸಿದೆ. ಅಲ್ಲದೇ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪಟ್ಟಿಗೆ ಸೇರ್ಪಡೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net