ಬೆಂಗಳೂರು: 2025ರ ವರ್ಷಾರಂಭದಲ್ಲೇ ದರ ಏರಿಕೆಗೆ ಬಿಸಿಗೆ ನಲುಗಿದ್ದ ಸಿಲಿಕಾನ್ ಸಿಟಿ ಮಂದಿ ಇದೀಗ ಶಾಕ್ನಿಂದ ಹೊರಬರುವ ಮುನ್ನವೇ ಮತ್ತೊಂದು ಸುತ್ತಿನ ದರ ಏರಿಕೆಯ ಬಿಸಿ ತಟ್ಟುವುದು ಪಕ್ಕಾ ಆಗಿದೆ. ಬಸ್, ಮೆಟ್ರೋ ಬೆನ್ನಲ್ಲೇ ಇದೀಗ ಆಟೋ ದರ ಏರಿಕೆಗೆ ಗ್ರೀನ್ ಸಿಗ್ನಲ್ ದೊರೆತ್ತಿದ್ದು, ಜನರಿಗೆ ಮತ್ತೊಮ್ಮೆ ಹೊರೆಯಾಗುವುದು ಪಕ್ಕಾ ಆಗಿದೆ.
ಆಟೋ ದರ ಏರಿಕೆ ಬಗ್ಗೆ ಸಂಚಾರ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸಭೆ ನಡೆದಿದ್ದು, ದರ ಪರಿಷ್ಕರಣೆಗೆ ಸಮ್ಮತಿಸಲಾಗಿದೆ. ಇದರಲ್ಲಿ ಕನಿಷ್ಠ ದರ ಏರಿಕೆಯೂ ಕುಡ ಒಳಗೊಂಡಿದ್ದು, ದರ ಏರಿಕೆ ಸಂಬಂಧ ಒಂದು ವಾರದ ವರೆಗೆ ಆಟೋ ಚಾಲಕ ಸಂಘಟನೆಗಳ ಅಭಿಪ್ರಾಯಕ್ಕೆ ಅವಕಾಶ ನೀಡಲಾಗಿದೆ. ಸಂಘಟನೆಗಳ ಅಭಿಪ್ರಾಯವನ್ನು ತಿಳಿಸಿದ ನಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳುಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಿಗೆ ವರದಿ ಸಲ್ಲಿಸಲಿದ್ದಾರೆ. ವರದಿ ಆಧರಿಸಿ ಪ್ರಾದೇಶಿಕ ಸಾರಿಗೆ ಆಯುಕ್ತರು ದರ ಏರಿಕೆಯ ಸಂಬಂಧ ಎಷ್ಟು ಮಾಡಬೇಕೆಂದು ಘೋಷಣೆ ಮಾಡಲಿದ್ದಾರೆ.
ಚಾಲಕರ ಬೇಡಿಕೆಯೇನು?
ಆಟೋದ ಕನಿಷ್ಠ ಪ್ರಯಾಣದರವನ್ನು 30 ರೂನಿಂದ 40 ರೂಗೆ ಏರಿಸಬೇಕು ಮತ್ತು ಪ್ರತಿ ಕಿಲೋಮೀಟರಿಗೆ 15 ರೂಪಾಯಿ ದರವನ್ನು 20 ರೂಪಾಯಿಗೆ ಹೆಚ್ಚಿಸಬೇಕೆಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ. ಜನವರಿ ಬಿಎಂಟಿಸಿ, ಕೆಎಸ್ಆರ್ಟಿಸಿ, ಫೆಬ್ರವರಿಯಲ್ಲಿ ಮೆಟ್ರೋ ದರ ಏರಿಕೆಯಾಗುವ ಮೂಲಕ ಜನರಿಗೆ ಶಾಕ್ ನೀಡಲಾಗಿತ್ತು. ಇದೀಗ ಮಾರ್ಚ್ ತಿಂಗಳಲ್ಲಿ ಆಟೋ ದರ ಹೆಚ್ಚಳವಾಗುವುದು ಪಕ್ಕಾ ಆಗಿದ್ದು, ಜನರಿಗೆ ಮತ್ತಷ್ಟು ಹೊರೆಯಾಗುವುದು ಪಕ್ಕಾ ಆಗಿದೆ.
ದರ ಹೆಚ್ಚಾಗಿದ್ದು ಯಾವಾಗ?
ಈ ಹಿಂದೆ 2021 ರಲ್ಲಿ ಆಟೋ ಮೀಟರ್ ದರ ಹೆಚ್ಚಳ ಮಾಡಲಾಗಿತ್ತು. ಅಲ್ಲದೇ, ಆಟೋ ಸಿಎನ್ಜಿ ಅನಿಲದ ದರವೂ ಒಂದು ಕೆಜಿಗೆ 88 ರೂಪಾಯಿ ಆಗಿದೆ. ಎಲ್ಪಿಜಿ ದರ ಕೆಜಿಗೆ 61 ರೂಪಾಯಿ ಆಗಿದ್ದಾಗ ಮೀಟರ್ ದರ ಪರಿಷ್ಕರಣೆ ಮಾಡಲಾಗಿತ್ತು. ಆದರೆ ಈಗ 88 ರೂಪಾಯಿಗೆ ಹೆಚ್ಚಳವಾಗಿದೆ, ಅದ್ದರಿಂದ ಆಟೋ ಮೀಟರ್ ದರವನ್ನು ಏರಿಕೆ ಮಾಡಲೇಬೇಕೆಂದು ಆಟೋ ಚಾಲಕರು ಪಟ್ಟು ಹಿಡಿದಿದ್ದಾರೆ.
ರನ್ಯಾ ಬಳಿಕ ಸ್ಯಾಂಡಲ್ವುಡ್ನ ಮತ್ತಿಬ್ಬರು ನಟಿಯರಿಗೆ ಶಾಕ್ ನೀಡಿದ ಪೊಲೀಸರು!
ಮೃತಪಟ್ಟ ಸಾಕುನಾಯಿಗೆ ಜೀವ ತರಿಸಿದ ಮಹಿಳೆ; ಇದಕ್ಕಾಗಿ ಈಕೆ ಖರ್ಚು ಮಾಡಿದ್ದು ಮಾತ್ರ…