ಚಿನ್ನ ಮತ್ತೆ ಸಾರ್ವಕಾಲಿಕ ದಾಖಲೆ: 10 ಗ್ರಾಂ ಸ್ವರ್ಣ ಈಗ ಇನ್ನಷ್ಟು ದುಬಾರಿ; ಬೆಳ್ಳಿ 1000 ರೂ. ಇಳಿಕೆ | Gold Surge

gold
Published on

Gold Surge: ಕಳೆದ ಒಂದೆರೆಡು ವಾರಗಳಿಂದ ಇಳಿಕೆ-ಏರಿಕೆಯಲ್ಲಿದ್ದ ಚಿನ್ನದ ಬೆಲೆ ಇಂದು ಒಂದೇ ದಿನ ಸಾರ್ವಕಾಲಿಕ ದಾಖಲೆಯನ್ನು ಕಂಡಿದೆ. 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 2,100 ರೂ. ಹೆಚ್ಚಾಗಿದೆ. ಮತ್ತೊಂದೆಡೆ, ಬೆಳ್ಳಿ 1000 ರೂ. ಇಳಿಕೆಯಾಗಿದೆ.

'ಪಿಟಿಐ' ವರದಿ ​​ಪ್ರಕಾರ, ಶುಕ್ರವಾರ (ಆ.29) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ 2,100 ರೂ. ಏರಿಕೆಯಾಗಿದೆ. ಇದಕ್ಕೂ ಮೊದಲು 10 ಗ್ರಾಂ ಸ್ವರ್ಣದ ಬೆಲೆ 1,01,570 ರೂ. ಇತ್ತು. ಈ ದಿಢೀರ್​ ಹಾಗೂ ಭಾರೀ ಏರಿಕೆಯ ನಂತರ, 1,03,670 ರೂ.ಗೆ ತಲುಪಿದೆ. ಇದು 'ಚಿನ್ನ'ದಂತ ಗ್ರಾಹಕರನ್ನು ಅಕ್ಷರಶಃ ಬೆರಗಾಗಿಸಿದೆ.

ಸತತ ನಾಲ್ಕನೇ ವಹಿವಾಟಿನಲ್ಲಿಯೂ ಏರಿಕೆಯ ಹಾದಿಯನ್ನು ಮುಂದುವರೆಸಿರುವ 24 ಕ್ಯಾರೆಟ್​ ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆ ಸದ್ಯ ಚಿನ್ನ ಕೊಳ್ಳುವವರನ್ನು ಕಂಗಾಲಾಗಿಸಿದೆ. ಇದೀಗ 2,100 ರೂ. ಹೆಚ್ಚಳದ ಮೂಲಕ ಚಿನ್ನವು 1,03,100 ರೂಪಾಯಿಯ ಹೊಸ ಜೀವಮಾನದ ಗರಿಷ್ಠ ಮಟ್ಟವನ್ನು ತಲುಪಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net