ದುಬೈಯಿಂದ ಚಿನ್ನ ಕಳ್ಳಸಾಗಾಣೆ; 2.50 ಕೆಜಿ ಚಿನ್ನ ಜಪ್ತಿ

WhatsApp Image 2024-07-24 at 9.02.24 PM
Published on

ಬೆಂಗಳೂರು: ದುಬೈಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಬಂದಿಳಿದ ವಿಮಾನದ ಇಬ್ಬರು ಪ್ರಯಾಣಿಕರ ಬಳಿ 1.68 ಕೋಟಿ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಮಂಗಳವಾರ ದುಬೈಯಿಂದ ಕೆಐಎಗೆ ಬಂದ ಪ್ರಯಾಣಿಕರನ್ನು ಏರ್ ಇಂಟೆಲಿಜೆನ್ಸ್ ಅಧಿಕಾರಿಗಳು ಸ್ಕಾೃನಿಂಗ್ ಮಾಡಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಇಬ್ಬರ ಬಟ್ಟೆಯಲ್ಲಿ ಲೋಹ ಬಚ್ಚಿಟ್ಟಿರುವುದು ಗೊತ್ತಾಗಿ ವಶಕ್ಕೆ ಪಡೆದು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ್ದಾರೆ. ಉಡುಪಿನಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನ ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದ್ದು,

ಪ್ರತ್ಯೇಕ ಮಾಡಿ ನೋಡಿದಾಗ 2 ಕೆಜಿ 579 ಗ್ರಾಂ ಚಿನ್ನದ ಪೇಸ್ಟ್ ಪತ್ತೆಯಾಗಿದೆ. ಇದರ ಮೌಲ್ಯ 1.69 ಕೋಟಿ ರೂ. ಆಗಿದೆ ಎಂದು ಕೆಐಎ ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net