

ನವದೆಹಲಿ: ಚಿನ್ನಾಭರಣ ಪ್ರಿಯರಿಗೆ ಸೋಮವಾರ ದೊಡ್ಡ ಶಾಕ್ ಉಂಟಾಗಿದೆ. ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಭಾರಿ ಏರಿಕೆ ಕಂಡು ಬಂದಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 49,742 ರೂಪಾಯಿಯಿದ್ದ ಚಿನ್ನದ ದರ ಸೋಮವಾರ 877 ರೂಪಾಯಿ ಏರಿಕೆ ಕಂಡಿದೆ. ಇದೀಗ 10 ಗ್ರಾಂ ಚಿನ್ನದ ದರ 50,619 ರೂಪಾಯಿಯಷ್ಟಾಗಿದೆ. ಹಾಗೆಯೇ ಬೆಳ್ಳಿ ದರದಲ್ಲೂ ಏರಿಕೆ ದಾಖಲಾಗಿದೆ. ಒಂದು ಕೆ.ಜಿ ಬೆಳ್ಳಿ ದರದಲ್ಲಿ ಬರೋಬ್ಬರಿ 2,012 ರೂಪಾಯಿ ಹೆಚ್ಚಳ ಕಂಡುಬಂದಿದ್ದು, ಬೆಲೆ 67,442 ರೂಪಾಯಿಯಿಂದ 69,454 ರೂಪಾಯಿಗೆ ಹಾರಿದೆ.
ಬೆಂಗಳೂರಿನಲ್ಲಿ ಅಪರಂಜಿ ಚಿನ್ನದ ದರ (10 ಗ್ರಾಂ) 51,250 ರೂಪಾಯಿಷ್ಟಿದ್ದರೆ, ಅಭರಣ ಚಿನ್ನದ ದರ ಗ್ರಾಂ ಗೆ 4,780 ರೂಪಾಯಿಯಾಗಿದೆ. ಬೆಳ್ಳಿ ದರ ಕೆಜಿಗೆ 69,700 ರೂಪಾಯಿಗೆ ಏರಿಕೆಯಾಗಿದೆ. (ಪಿಟಿಐ)