ಚಿನ್ನ ಮತ್ತಷ್ಟು ದುಬಾರಿ! ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ದರ

golds
Published on

ನವದೆಹಲಿ: ಅಮೆರಿಕದ ತೆರಿಗೆ ನೀತಿಯ ಅನಿಶ್ಚಿತತೆ ಮಧ್ಯೆಯೂ ಜಾಗತಿಕ ಮಾರುಕಟ್ಟೆಯಲ್ಲಿದ್ದ ದೃಢ ಪ್ರವೃತ್ತಿಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಸುಮಾರು 1300 ರೂ.ನಷ್ಟು ಏರಿಕೆಯಾಗಿದೆ. ಸತತ ನಾಲ್ಕನೇ ದಿನವೂ ಬಂಗಾರದ ದರ ಹೆಚ್ಚಳವಾಗಿದ್ದು, ಶೇ. 99.9ರಷ್ಟು ಶುದ್ಧತೆಯ ಚಿನ್ನ 10 ಗ್ರಾಂಗೆ 90,750 ರೂ.ಗೆ ತಲುಪಿದೆ.

ಗುರುವಾರ ಇದರ ಬೆಲೆ 89,450 ರೂ. ಇತ್ತು. ಶೇ. 99.5ರಷ್ಟು ಶುದ್ಧತೆಯ ಚಿನ್ನ ಗುರುವಾರ 89,050 ರೂ. ಇದ್ದದ್ದು ಸೋಮವಾರ 90,350ಕ್ಕೆ ಮುಟ್ಟಿತು. ಪ್ರಸಕ್ತ ವರ್ಷ ಇದುವರೆಗೆ ಹಳದಿಲೋಹದ ಬೆಲೆ 11,360 ರೂ.ನಷ್ಟು, ಅಂದರೆ ಶೇ. 14.31ರಷ್ಟು ಏರಿಕೆ ಆದಂತಾಗಿದೆ. ಜ. 1ರಂದು ಇದು 79,390 ರೂ. ಇತ್ತು.

ಶುಕ್ರವಾರ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಚಿನ್ನ ಬೆಳ್ಳಿ ಮಾರುಕಟ್ಟೆಗೆ ರಜೆ ಇತ್ತು. ಬೆಳ್ಳಿ ಬೆಲೆ ಕೂಡ ಸೋಮವಾರ 1,300 ರೂ. ಏರಿಕೆಯಾಗಿ ಕೆಜಿಗೆ 1,02,500 ರೂ.ಗಳ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿತು. ಗುರುವಾರ ಇದು 1,01,200 ರೂ. ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net