ಅಕ್ಷಯ ತೃತೀಯದಂದೇ ಚಿನ್ನದಂಗಡಿಗೆ ದೋಖಾ! ನಕಲಿ ಆಭರಣ ನೀಡಿ 47ಗ್ರಾಂ ಚಿನ್ನ ವಂಚಿಸಿದ ಮಹಿಳೆಯರು! Akshaya Tritiya

Akshaya Tritiya
Published on

Akshaya Tritiya: ಅಕ್ಷಯ ತೃತೀಯದಂದು ಚಿನ್ನ ಖರೀದಿಗೆ ಹೋದ ಮಹಿಳೆಯರು ನಕಲಿ ಒಡವೆಗಳನ್ನು ಕೊಟ್ಟು ಆಭರಣ ಅಂಗಡಿಗೆ ವಂಚಿಸಿದ ಘಟನೆ ರಾಯ್‌ಪುರದ ಉರ್ಲಾ ಪ್ರದೇಶದಲ್ಲಿ ಬುಧವಾರ (ಏ.30) ನಡೆದಿದೆ.

ರಾಯ್‌ಪುರದ ಉರ್ಲಾದಲ್ಲಿನ ಒಂದು ಪ್ರತಿಷ್ಠಿತ ಆಭರಣ ಅಂಗಡಿ ಅಕ್ಷಯ ತೃತೀಯಂದು ಕೊಡುಗೆಯಾಗಿ ಹಳೆಯ ಆಭರಣಗಳನ್ನು ಕೊಟ್ಟು ಅದೇ ಬೆಲೆಗೆ ಹೊಸ ಆಭರಣವನ್ನು ತೆಗೆದುಕೊಳ್ಳಲು ಬಂಪರ್​ ಆಫರ್​​ ನೀಡಲಾಗಿತ್ತು. ಇದನ್ನು ತಿಳಿದ ಇಬ್ಬರು ಮಹಿಳೆಯರು ಒಂದಿಷ್ಟು ನಕಲಿ ಒಡೆವೆಗಳನ್ನು ಕೊಟ್ಟು ಅಲ್ಲಿನ ಚಿನ್ನದ ಒಡವೆಗಳನ್ನು ತಮ್ಮದಾಗಿಸಿಕೊಂಡು ಅಂಗಡಿ ಮಾಲೀಕನಿಗೆ ವಂಚಿಸಿದ್ದಾರೆ. ಈ ಮಹಿಳೆಯರು ನಕಲಿ ಒಡವೆಯ ಜೊತೆ ಅದರ ಡುಬ್ಲಿಕೇಟ್​​ ಬಿಲ್​ಗಳನ್ನು ತೋರಿಸಿ ಮಾಲೀಕನನ್ನು ಯಾಮಾರಿಸಿದ್ದಾರೆ.

ಆಭರಣ ಅಂಗಡಿಯ ಮಾಲೀಕನು ಅವರು ಹೋದ ನಂತರ ಆಭರಣಗಳನ್ನು ಪರಿಶೀಲಿಸಿದಾಗ, ಅದು ನಕಲಿ ಎಂದು ತಿಳಿದುಬಂದಿದೆ. ಈ ಮಹಿಳೆಯರು ಪ್ಲಾನ್​ ಮಾಡಿ ನಕಲಿ ಆಭರಣವನ್ನು ಕೊಟ್​ಟು 47 ಗ್ರಾಂ ಚಿನ್ನದ ಒಡವೆಗಳನ್ನು ವಂಚಿಸಿದ್ದಾರೆ.

ಅಂಗಡಿಯವನು ಅಪರಿಚಿತ ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ. ಸಿಸಿಟಿವಿ ಕ್ಯಾಮೆರಾದಿಂದ ಇಬ್ಬರೂ ಮಹಿಳೆಯರ ಚಿತ್ರಗಳನ್ನು ಹೊರತೆಗೆಯಲಾಗಿದ್ದು, ಅವರ ಹುಡುಕಾಟ ಆರಂಭಿಸಲಾಗಿದೆ ಎಂದು ಉರ್ಲಾ ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net