

ನವದೆಹಲಿ: ಸಾಗರೋತ್ತರ ಮಾರುಕಟ್ಟೆಗಳಲ್ಲಿನ ದೃಢ ಪ್ರವೃತ್ತಿಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಚಿನ್ನದ ಬೆಲೆ 950 ರೂ.ನಷ್ಟು ಏರಿಕೆಯಾಗಿದೆ.
ಸೋಮವಾರ 3400 ರೂ.ನಷ್ಟು ಏರಿಕೆಯಾಗಿ 10 ಗ್ರಾಂಗೆ 96550 ರೂ.ಗೆ ತಲುಪಿದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನ ಮಂಗಳವಾರ 97,500 ರೂ.ಗೆ ಮಾರಾಟವಾಯಿತು. ಶೇ. 99.5ರಷ್ಟು ಶುದ್ಧತೆಯ ಚಿನ್ನ ಸೋಮವಾರ 96,100 ರೂ. ಇದ್ದದ್ದು ಮಂಗಳವಾರ ಸಾವಿರ ರೂ. ಏರಿಕೆಯಾಗಿ 97,100 ರೂ.ಗೆ ತಲುಪಿತು.
ಬೆಳ್ಳಿಯ ದರ ಕೆಜಿಗೆ ಸೋಮವಾರ 99,700 ರೂ. ಇದ್ದದ್ದು ಮಂಗಳವಾರ 250 ರೂ. ಇಳಿಕೆಯಾಗಿ 99,450 ರೂ.ಗೆ ಮಾರಾಟವಾಯಿತು ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.