Delivery Agent: ಡೊಮಿನೊಸ್ ಪಿಜ್ಜಾ ಆರ್ಡರ್ ಮಾಡಿದ್ದ ಮುಂಬೈ ದಂಪತಿ, ತಮ್ಮ ಆರ್ಡರ್ ಡೆಲಿವರಿ ಮಾಡಲು ಬಂದ ಯುವಕನಿಗೆ ಮರಾಠಿ ಭಾಷೆಯಲ್ಲೇ ಮಾತನಾಡಬೇಕು ಎಂದು ಒತ್ತಾಯ ಹೇರಿದ್ದಲ್ಲದೇ ಆತನಿಗೆ ಹಣ ಕೊಡದೆ ವಾಪಾಸ್ ಕಳಿಸಿದ ಘಟನೆ ಮುಂಬೈನ ಭಂಡಪ್ನಲ್ಲಿ ವರದಿಯಾಗಿದೆ.

ಇದನ್ನೂ ಓದಿ: ಸಂಸ್ಕಾರ ನೀಡಿದರೆ ಮಕ್ಕಳು ದೇಶದ ಆಸ್ತಿ, ನಾಟಕಕಾರ ಡಾ. ಶಶಿಧರ ನರೇಂದ್ರ ಅಭಿಮತ, ಅಂತರ್ ವಲಯ ಯುವಜನೋತ್ಸವಕ್ಕೆ ಚಾಲನೆ
ಹಿಂದಿ-ಮರಾಠಿ ಭಾಷೆ ವಿಚಾರಕ್ಕೆ ಡೆಲಿವರಿ ಬಾಯ್ ಮತ್ತು ದಂಪತಿ ನಡುವೆ ತೀವ್ರ ವಾಗ್ವಾದ ನಡೆದಿದೆ. ಫುಡ್ ಡೆಲಿವರಿ ಸಮಯದಲ್ಲಿ ಹಿಂದಿ ಭಾಷೆಯಲ್ಲೇ ನಿಮ್ಮ ಪಿಜ್ಜಾ ತೆಗೆದುಕೊಳ್ಳಿ ಎಂದ ಡೆಲಿವರಿ ಬಾಯ್ ರೋಹಿತ್ಗೆ ದಂಪತಿಗಳು ಮರಾಠಿ ಭಾಷೆ ಮಾತನಾಡುವಂತೆ ಒತ್ತಾಯ ಹೇರಿದ್ದಾರೆ. ನೀನು ಇಲ್ಲಿ ಮರಾಠಿಯಲ್ಲೇ ಮಾತನಾಡಬೇಕು. ಹಾಗಿದ್ರೆ ಮಾತ್ರ, ನಾನು ಆರ್ಡರ್ ಪಡೀತಿನಿ ಮತ್ತು ಅದಕ್ಕೆ ಹಣ ಕೊಡ್ತೀನಿ. ಇಲ್ಲದಿದ್ರೆ ಹಣ ಕೊಡಲ್ಲ ಎಂದು ಮಹಿಳೆ ಹೇಳಿದ್ದಾಳೆ.
#Mumbai में डोमिनोज पिज्जा के डिलीवरी बॉय को कस्टमर ने कहा “मराठी बोलो..तो ही पैसे देंगे..12 मई को भांडुप इलाके में डोमिनोज़ पिज्जा के डिलीवरी बॉय रोहित लेवरे को कस्टमर ने पिज्जा के पैसे देने से मना किया क्योंकि “रोहित को मराठी बोलनी नहीं आती..वीडियो आया सामने..@TNNavbharat pic.twitter.com/4x1X0VRX4N
— Atul singh (@atuljmd123) May 13, 2025
ಇದಕ್ಕೆ ಪ್ರತಿಕ್ರಿಯಿಸಿದ ರೋಹಿತ್, “ಮರಾಠಿಯಲ್ಲಿ ಮಾತನಾಡಬೇಕು ಎಂದಿದ್ದರೆ ಆರ್ಡರ್ ಮಾಡುವ ಮುನ್ನವೇ ಸೂಚಿಸಬೇಕಿತ್ತು. ನಿಮಗೆ ಹಣ ಕೊಡಲು ಆಗಲ್ಲ ಎಂದರೆ ನನಗೇನು ತೊಂದರೆಯಿಲ್ಲ. ಆದರೆ, ಈ ರೀತಿ ಎಲ್ಲ ಮಾತನಾಡಬೇಡಿ. ಇದು ಯಾವ ರೀತಿಯ ಬಲವಂತ ಅನ್ನೋದೇ ನನಗೆ ಗೊತ್ತಾಗ್ತಿಲ್ಲ” ಎಂದು ಕೆಲ ಸಮಯ ಮಹಿಳೆ ಜೊತೆ ವಾಗ್ವಾದ ನಡೆಸಿದ ಡೆಲಿವರಿ ಏಜೆಂಟ್, ಕಡೆಗೂ ಹಣ ಪಡೆಯದೆ ಅಲ್ಲಿಂದ ವಾಪಾಸ್ ಆಗಿದ್ದಾರೆ.
ಈ ಕುರಿತು ರೋಹಿತ್ ಸಂಸ್ಥೆಗೆ ದೂರು ಸಲ್ಲಿಸಿದ್ದೇ ಆದರೂ ಕಂಪನಿಯಿಂದ ಮಾತ್ರ ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿಯಾಗಿದೆ. ಸದ್ಯ ವಿಡಿಯೋ ಜಾಲತಾಣಗಳಲ್ಲಿ ಹರಿದಾಡಿದೆ,(ಏಜೆನ್ಸೀಸ್).