Ban Turkey: ಭಾರತ ಮತ್ತು ಪಾಕ್ ನಡುವಿನ ಉದ್ವಿಗ್ನತೆ ಸಮಯದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದ್ದ ಟರ್ಕಿಗೆ ಇದೀಗ ಸಂಕಷ್ಟ ಎದುರಾಗಿದೆ. ಅಂದು ಭಾರತದೊಂದಿಗೆ ನಡೆದ ಘರ್ಷಣೆಯಲ್ಲಿ ಪಾಕ್ ಜೊತೆಗೆ ಕೈಜೋಡಿಸಿದ್ದೇ ಇದಕ್ಕೆಲ್ಲ ಕಾರಣವಾಗಿದೆ.

ಇದನ್ನೂ ಓದಿ: ಬಸವಣ್ಣನವರು ವಿಶ್ವಮಾನವ ಎಂದು ನಾವೆಲ್ಲ ಒಪ್ಪಿಕೊಳ್ಳಬೇಕು
ಬ್ಯಾನ್ ಟರ್ಕಿ ಅಭಿಯಾನ
ಪುಣೆಯ ಉದ್ಯಮಿಗಳು ಟರ್ಕಿಯಿಂದ ಆಮದಾಗುವ ಸೀಸನಲ್ ಸೇಬುಗಳನ್ನು ಬಹಿಷ್ಕರಿಸಿದ್ದಾರೆ. ಚಿಲ್ಲರೆ ಖರೀದಿದಾರರು ಟರ್ಕಿ ಸೇಬುಗಳ ಬೇಡಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. “1000ದಿಂದ 1,200 ಕೋಟಿ ರೂ. ಆದಾಯ ನೋಡುತ್ತಿದ್ದ ಟರ್ಕಿ ಸೇಬುಗಳ ಅವಶ್ಯಕತೆ ಇನ್ನೂ ನಮಗಿಲ್ಲ. ಈ ಸೇಬಿನ ಬದಲಿಗೆ ಹಿಮಾಚಲ ಪ್ರದೇಶ, ಉತ್ತರಾಖಂಡ, ಇರಾನ್ ಸೇರಿದಂತೆ ಇತರೆ ಪ್ರದೇಶಗಳಿಂದ ಆಮದು ಮಾಡಿಕೊಳ್ಳಲು ಚಿಂತಿಸಿದ್ದೇವೆ” ಎಂದು ಪುಣೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಾರುಕಟ್ಟೆಯಲ್ಲಿ ಸೇಬು ವ್ಯಾಪಾರಸ್ಥ ಸುಯೋಗ್ ಝೆಂಡೆ ಹೇಳಿದ್ದಾರೆ.
#WATCH | Pune, Maharashtra: Following Turkey’s support for Pakistan amid recent tensions with India, Apple traders in Pune say they have decided to boycott Turkish apples
Suyog Zende, an apple trader at Pune’s APMC market, says, “We have decided to stop buying apples from… pic.twitter.com/tldXdCF4p7
— ANI (@ANI) May 13, 2025
ಸೋಷಿಯಲ್ ಮೀಡಿಯಾದಲ್ಲಿ ‘ಬ್ಯಾನ್ ಟರ್ಕಿ’ ಎಂಬ ಹೆಸರಿನಲ್ಲಿ ಟ್ರೆಂಡ್ ಮಾಡುತ್ತಿರುವ ನೆಟ್ಟಿಗರು, ಟರ್ಕಿಗೆ ಇದೇ ತಕ್ಕ ಶಾಸ್ತಿ. ವೈರಿ ರಾಷ್ಟ್ರಕ್ಕೆ ಬೆಂಬಲ ಸೂಚಿಸುವ ಇಂಥಾ ದೇಶದ ವಸ್ತುಗಳನ್ನು ಬಹಿಷ್ಕರಿಸಬೇಕು. ನಮ್ಮ ನೆಲದಲ್ಲಿ ಅವರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಬಾರದು ಮತ್ತು ವ್ಯಾಪಾರ-ವಹಿವಾಟು ನಿಲ್ಲಿಸಬೇಕು ಎಂಬ ಆಗ್ರಹ ಕೇಳಿಬಂದಿವೆ,(ಏಜೆನ್ಸೀಸ್).
ಅದೊಂದು ಮಿಸ್ ಆಗಿದ್ದೇ ವರವಾಯ್ತು ಈ ನಟನಿಗೆ! ಇಂದು ಸೂಪರ್ಸ್ಟಾರ್ ಆಗಿ ಕೋಟಿ..ಕೋಟಿ ರೂ. ಸಂಪಾದನೆ | Actor