ಅದೊಂದು ಮಿಸ್​ ಆಗಿದ್ದೇ ವರವಾಯ್ತು ಈ ನಟನಿಗೆ! ಇಂದು ಸೂಪರ್​ಸ್ಟಾರ್​ ಆಗಿ ಕೋಟಿ..ಕೋಟಿ ರೂ. ಸಂಪಾದನೆ | Actor

blank
blank

Actor: ಚಿತ್ರರಂಗ ಎಂದರೆ ಹಾಗೇನೆ. ಪ್ರಾರಂಭದಲ್ಲಿ ಅವಕಾಶಗಳು ಹೇಗೆ ಹುಡುಕಿಕೊಂಡು ಬರುತ್ತದೆ? ಯಾರಿಂದ ಒಲಿದು ಬರುತ್ತದೆ ಎಂಬುದರ ಅರಿವು ಖಂಡಿತ ಇರುವುದಿಲ್ಲ. ಓದಿನ ಜೀವನದಲ್ಲಿರುವಾಗ ಮುಂದಿನ ಹೆಜ್ಜೆಯೇನು? ನಾವು ಬಯಸಿದ ವೃತ್ತಿಯಲ್ಲೇ ಜೀವನ ಸಾಗಿಸುತ್ತೀವಾ? ಅಥವಾ ವಿಧಿ ನಮ್ಮ ಹಣೆಯಲ್ಲಿ ಬೇರೆ ಏನಾದರೂ ಬರೆದಿದೆಯಾ ಎಂಬ ಹತ್ತು ಹಲವು ಪ್ರಶ್ನೆಗಳು ನಮ್ಮಲ್ಲಿ ಮೂಡುತ್ತವೆ. ಅದರಲ್ಲೂ ಕೆಲವರು ತಾವು ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ನಟಿಸುತ್ತೇನೆ, ಸ್ಟಾರ್​ ನಟನಾಗಿ ಮಿಂಚುತ್ತೇನೆ ಎಂಬ ಕನಸು ಸಹ ಇರೋದಿಲ್ಲ. ಆದರೆ, ಮುಂದೊಂದು ದಿನ ಅವರೇ ದೊಡ್ಡ ಸೆಲೆಬ್ರಿಟಿಗಳಾಗಿ (Actor) ಮೆರೆಯುತ್ತಾರೆ.

ಇದನ್ನೂ ಓದಿ: ಜಿಲ್ಲಾಡಳಿತದಿಂದ ಮಲ್ಲಮ್ಮ ಜಯಂತ್ಯುತ್ಸವ ಹೇಮರೆಡ್ಡಿ ಮಲ್ಲಮ್ಮನವರ ಆಚಾರ, ವಿಚಾರ ಜೀವನದಲ್ಲಿ ಅಳವಡಿಸಿಕೊಳ್ಳಿ: ಸುರೇಶ ವರ್ಮ 

ಬಯಸಿದಂತೆ ನಡೆಯಲಿಲ್ಲ

ನಟರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಹಲವಾರು ಅವಕಾಶಗಳನ್ನು ಗಿಟ್ಟಿಸಿಕೊಂಡು, ಉತ್ತಮ ಹೆಸರು ಸ್ಥಾಪಿಸಬೇಕು ಎಂಬ ಕನಸು ಅನೇಕ ಕಲಾವಿದರದ್ದು. ಇದಕ್ಕಾಗಿ ಅವಕಾಶ ಹುಡುಕಿಕೊಂಡು ಊರಿಂದ ಊರು ಬಿಟ್ಟು, ಗೊತ್ತಿಲ್ಲದ ಜನ, ಅರಿಯದ ಜಾಗದಲ್ಲಿ ವಾಸ ಮಾಡಿ, ತಾವು ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ಇದೇ ಹಾದಿಯಲ್ಲಿ ಬಂದ ಈ ನಟ ಕೂಡ ಪ್ರಾರಂಭದಲ್ಲಿ ಅನೇಕ ಕಷ್ಟ, ಸವಾಲುಗಳನ್ನು ಅನುಭವಿಸಿ, ಅವಕಾಶಕ್ಕಾಗಿ ಹಂಬಲಿಸಿದರು. ಆದರೆ, ಅದ್ಯಾವುದು ಅವರು ಬಯಸಿದಂತೆ ನಡೆಯಲಿಲ್ಲ.

ಅದೊಂದು ಮಿಸ್​ ಆಗಿದ್ದೇ ವರವಾಯ್ತು ಈ ನಟನಿಗೆ! ಇಂದು ಸೂಪರ್​ಸ್ಟಾರ್​ ಆಗಿ ಕೋಟಿ..ಕೋಟಿ ರೂ. ಸಂಪಾದನೆ | Actor

ಆರಂಭದ ದಿನಗಳಲ್ಲಿ ಮಾಡಲಿಂಗ್

ನಿರಂತರ ಶ್ರಮ, ತಾಳ್ಮೆ, ಸಜ್ಜನಿಕೆ ಗುಣ ಯಾವುದೇ ಕಾರಣಕ್ಕೂ ನಮ್ಮ ಕೈಬಿಡುವುದಿಲ್ಲ ಎಂಬುದಕ್ಕೆ ಈ ಸ್ಟಾರ್​ ನಟನ ಜೀವನವೇ ಸಾಕ್ಷಿ. ಆರಂಭದ ದಿನಗಳಲ್ಲಿ ಮಾಡಲಿಂಗ್ ಮಾಡಿಕೊಂಡಿದ್ದ ಈ ನಟ, ಇಂದು ಬಾಲಿವುಡ್​ನ ಸೂಪರ್​ಸ್ಟಾರ್​. ಸಾಲು ಸಾಲು ಹಿಟ್​ ಸಿನಿಮಾಗಳಲ್ಲಿ ಅಭಿನಯಿಸಿ, ಅಪಾರ ಸಿನಿಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಇವರು, ಇಂದಿಗೂ ಬಾಲಿವುಡ್​ನಲ್ಲಿ ಉತ್ತಮ ಸಿನಿಮಾಗಳನ್ನು ಮಾಡುವಲ್ಲಿ ಹೆಚ್ಚು ನಿರತರಾಗಿದ್ದಾರೆ. ಅಸಲಿಗೆ ಈ ನಟ ಬೇರಾರು ಅಲ್ಲ, ಸೂಪರ್ ಹೀರೋ ಅಕ್ಷಯ್​ ಕುಮಾರ್.

ಇದನ್ನೂ ಓದಿ:  ಪಾಕ್​ಗೆ POK ಬಿಟ್ಟುಕೊಡುವೊಂದೆ ಬಾಕಿ ಉಳಿದಿದೆ: MEA ವಕ್ತಾರ ರಣಧೀರ್ ಜೈಸ್ವಾಲ್

ಫ್ಲೈಟ್​ ಮಿಸ್

1992ರಲ್ಲಿ ‘ದೀದರ್’​​ ಸಿನಿಮಾ ಮೂಲಕ ಸ್ಟಾರ್ ಆಗಿ ಮಿಂಚಿದ ಅಕ್ಷಯ್​ ಕುಮಾರ್​, ತದನಂತರ ಕಿಲಾಡಿ ಹೆಸರಿನ ಸರಣಿ ಸಿನಿಮಾಗಳಲ್ಲಿ ನಟಿಸಿ, ಅಪಾರ ಜನಮನ್ನಣೆ ಗಳಿಸಿದರು. ಆರಂಭದ ದಿನಗಳಲ್ಲಿ ಮಾಡಲಿಂಗ್ ಮಾಡುತ್ತಿದ್ದ ಅಕ್ಷಯ್​ಗೆ ಬೆಂಗಳೂರಿನಲ್ಲಿ ಆ್ಯಡ್​ ಶೂಟ್​ ಆಫರ್ ಒಲಿದುಬಂದಿತ್ತು. ಇದಕ್ಕಾಗಿ ತಯಾರಿ ಮಾಡಿಕೊಂಡು ಏರ್​ಪೋರ್ಟ್​ಗೆ ಬಂದಾಗ ತಾನು ಹೋಗಬೇಕಿದ್ದ ಫ್ಲೈಟ್​ ಮಿಸ್ ಆಗಿತ್ತು. ಇದರಿಂದ ಉತ್ತಮ ಅವಕಾಶ ಕಳೆದುಕೊಂಡ ನಟ, ಬಿಡುವಿನ ಸಮಯವನ್ನು ವ್ಯರ್ಥ ಮಾಡುವುದೇಕೆ ಎಂದು ನಿರ್ಮಾಪಕರೊಬ್ಬರನ್ನು ಖದ್ದಾಗಿ ಭೇಟಿ ಮಾಡ್ತಾರೆ. ಅಂದೇ ಅವರ ಲಕ್ ಬದಲಾಯಿತು.

ತದನಂತರ ಒಪ್ಪಿಕೊಂಡ, ಅಭಿನಯಿಸಿದ ಹಲವು ಸಿನಿಮಾಗಳು ಸೂಪರ್​ಹಿಟ್​ ಆದವು. ಇಂದು ಬಾಲಿವುಡ್​ನಲ್ಲಿ ತಮ್ಮದೇ ಬ್ರಾಂಡ್​ ಸೃಷ್ಟಿಸಿಕೊಂಡಿರುವ ಅಕ್ಷಯ್​ ಕುಮಾರ್​, ಐಷಾರಾಮಿ ಕಾರು, ಬಂಗಲೆ, ಆಸ್ತಿಯನ್ನು ಹೊಂದಿದ್ದಾರೆ,(ಏಜೆನ್ಸೀಸ್).

2027 ಏಕದಿನ ವಿಶ್ವಕಪ್: ಕೊಹ್ಲಿ, ರೋಹಿತ್ ಉಪಸ್ಥಿತಿ ಕುರಿತು ಸ್ಫೋಟಕ ಭವಿಷ್ಯ ನುಡಿದ ಗವಾಸ್ಕರ್​ | Kohli & Rohit

Share This Article

ನೀರು, ಸೋಪು ಇಲ್ಲದೆ ಕೊಳಕಾದ ಸ್ವಿಚ್‌ಬೋರ್ಡ್‌ನ್ನು ಹೊಸದರಂತೆ ಮಾಡಲು ಇಲ್ಲಿದೆ ಸೂಪರ್‌ ಟಿಪ್ಸ್‌ | Switchboard

Switchboard: ಸಾಮಾನ್ಯವಾಗಿ ಮನೆಗಳಲ್ಲಿರುವ ವಿದ್ಯುತ್ ಸ್ವಿಚ್‌ಬೋರ್ಡ್‌ಗಳು ದಿನ ಕಳೆದಂತೆ ಕೊಳಕಾಗುತ್ತದೆ. ವಿಶೇಷವಾಗಿ ಅಡುಗೆಮನೆಯಲ್ಲಿರುವ ಸ್ವಿಚ್‌ಬೋರ್ಡ್‌ಗಳು ಬಹಳ…

ಈ ಆಹಾರಗಳ ಅತಿಯಾದ ಸೇವನೆಯಿಂದ ಕಿಡ್ನಿ ಸ್ಟೋನ್‌ ಉಂಟಾಗಬಹುದು: ತಜ್ಞರ ಎಚ್ಚರಿಕೆ..! Health Tips

Health Tips: ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಸೊಂಟ, ಹೊಟ್ಟೆ ಮತ್ತು ಬೆನ್ನಿನಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ಈ…