

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಪ್ರಬಲ ಪ್ರವೃತ್ತಿಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಸೋಮವಾರ 580 ರೂ.ನಷ್ಟು ಹೆಚ್ಚಾಗಿದೆ.
ಶುಕ್ರವಾರ 10 ಗ್ರಾಂಗೆ 96,450 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಸೋಮವಾರ 97,030 ರೂ. ಆಗಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನದ ದರ 96 ಸಾವಿರ ರೂ. ಇದ್ದದ್ದು 96,580 ರೂ. ಆಗಿದೆ. ಬೆಳ್ಳಿಯ ಬೆಲೆ ಕೂಡ 500 ರೂ.ನಷ್ಟು ಹೆಚ್ಚಾಗಿದೆ. ಶುಕ್ರವಾರ ಪ್ರತಿ ಕೆಜಿಗೆ 98 ಸಾವಿರ ರೂ. ಇದ್ದ ಬೆಳ್ಳಿ ಸೋಮವಾರ 98,500 ರೂ.ಗೆ ಏರಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.