ಚಿನ್ನದ ಬೆಲೆ 200 ರೂ. ಏರಿಕೆ; ಮತ್ತೊಂದು ದಾಖಲೆ ಸೃಷ್ಟಿ

golds
Published on

ನವದೆಹಲಿ: ಆಭರಣ ತಯಾರಕರು ಮತ್ತು ದಾಸ್ತಾನುದಾರರಿಂದ ಖರೀದಿ ಭರಾಟೆ ಹೆಚ್ಚಿದ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯು ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಇನ್ನೂರು ರೂಪಾಯಿ ಏರಿಕೆ ಕಂಡಿದೆ.

ಶೇ. 99.9ರಷ್ಟು ಶುದ್ಧತೆಯ ಚಿನ್ನ ಬುಧವಾರ 10 ಗ್ರಾಂಗೆ 94,150 ಇದ್ದದ್ದು ಗುರುವಾರ 94,350 ರೂ.ಗೆ ಏರಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆಯೂ 200 ರೂ. ಏರಿಕೆಯೊಂದಿಗೆ 10 ಗ್ರಾಂಗೆ 93,900 ರೂಪಾಯಿಗೆ ತಲುಪಿ ಸಾರ್ವಕಾಲಿಕ ಗರಿಷ್ಠ ಮಟ್ಟದ ದಾಖಲೆ ಬರೆದಿದೆ. ಬೆಳ್ಳಿಯ ಬೆಲೆ ಗುರುವಾರ 1 ಸಾವಿರ ರೂಪಾಯಿ ಇಳಿಕೆಯಾಗಿ 1,00,500 ರೂ.ಗೆ ತಲುಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net