

ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರ (ಅ.14) ಚಿನ್ನ ಮತ್ತು ಬೆಳ್ಳಿ ದರದಲ್ಲಿ ಕೊಂಚ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ದರವು (Gold Price) 200 ರೂ. ಏರಿಕೆಯಾಗಿ 78,500 ರೂ.ಗಳಿಂದ 78,700 ರೂ.ಗೆ ತಲುಪಿದೆ. ಬೆಳ್ಳಿ ದರವು ಕೆ.ಜಿ.ಗೆ 500 ರೂ. ಏರಿಕೆಯಾಗಿದ್ದು, 93 ಸಾವಿರದಿಂದ 93,500 ರೂ.ಗೆ ತಲುಪಿದೆ.
ಪ್ರಸಕ್ತ ವರ್ಷದ ಜನವರಿ-ಸೆಪ್ಟೆಂಬರ್ ಅವಧಿಯಲ್ಲಿ ದೇಶದ ರಿಯಲ್ ಎಸ್ಟೇಟ್ ವಲಯದಲ್ಲಿನ ಈಕ್ವಿಟಿ ಹೂಡಿಕೆಯು ಶೇಕಡ 46ರಷ್ಟು ಏರಿಕೆಯಾಗಿದ್ದು, 74,798 ಕೋಟಿ ರೂ.ಗಳಷ್ಟಾಗಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಸಿಬಿಆರ್ಇ ತಿಳಿಸಿದೆ. 2018ರಿಂದ ರಿಯಲ್ ಎಸ್ಟೇಟ್ನಲ್ಲಿನ ಈಕ್ವಿಟಿ ಹೂಡಿಕೆಯಲ್ಲಿ ಇದು ಅತ್ಯಧಿಕವಾಗಿದೆ. 2018ರಲ್ಲಿ 48,746 ಕೋಟಿ ರೂ., 2019ರಲ್ಲಿ 53,788 ಕೋಟಿ ರೂ., 2020ರಲ್ಲಿ 50,426 ಕೋಟಿ ರೂ., 2021ರಲ್ಲಿ 49,586 ಕೋಟಿ ರೂ., 2022ರಲ್ಲಿ -ಠಿ;65,554 ಕೋಟಿ, 2023ರಲ್ಲಿ -ಠಿ;62,192 ಕೋಟಿ ಹೂಡಿಕೆಯಾಗಿದೆ.