ದಿಗವಪಲ್ಲಿಯಲ್ಲಿ ಚಿನ್ನಾಭರಣ ಕಳವು

Published on

ಚಿಂತಾಮಣಿ: ದೇವರ ಸಾಮಗ್ರಿಗಳಿಗೆ ಮೆರಗು ನೀಡುವ ನೆಪದಲ್ಲಿ ಅಪರಿಚಿತರು 38 ಗ್ರಾಂ ಆಭರಣ ಕದ್ದು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯ ದಿಗವಪಲ್ಲಿಯ ಕವಿತಾ (20) ನೀಡಿದ ದೂರು ಆಧರಿಸಿ ಆ.25ರಂದು ಪ್ರಕರಣ ದಾಖಲಾಗಿದೆ. ದ್ವಿಚಕ್ರವಾಹನದಲ್ಲಿ ಬಂದ ಮೂವರು ದೇವರ ಸಾಮಗ್ರಿಗಳನ್ನು ಸ್ವಚ್ಛಗೊಳಿಸಿ, ನಂತರ ಬಂಗಾರದ ಒಡವೆ ಸ್ವಚ್ಛಗೊಳಿಸುವುದಾಗಿ ಪಡೆದು, 2 ಗ್ರಾಂ ಕಿವಿ ಓಲೆ, 18 ಗ್ರಾಂ ಮಾಂಗಲ್ಯ ಸರ, 12 ಗ್ರಾಂನ 50 ಗುಂಡುಗಳು, 2 ಗ್ರಾಂ ಲಕ್ಷ್ಮೀಕಾಸು, 4 ಗ್ರಾಂ ಕಿವಿ ಓಲೆ ಕದ್ದೊಯ್ದಿದ್ದಾರೆ ಎಂದು ದೂರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net