ಚಿನ್ನ, ಬೆಳ್ಳಿ ಇಳಿಕೆ

Gold Silver
Published on

ನವದೆಹಲಿ: ಜಾಗತಿಕ ಮಟ್ಟದಲ್ಲಿನ ದುರ್ಬಲ ಪ್ರವೃತ್ತಿ ಹಿನ್ನೆಲೆಯಲ್ಲಿ ಚಿನ್ನದ ದರ ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ 170 ರೂ. ಇಳಿಕೆಯಾಗಿದೆ.

ಶೇ. 99.9ರಷ್ಟು ಶುದ್ಧತೆಯ ಚಿನ್ನ ಶುಕ್ರವಾರ 10 ಗ್ರಾಂಗೆ 1,01,540 ರೂ. ಇದ್ದದ್ದು ಸೋಮವಾರ 1,01,370 ರೂ. ಆಗಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನ 150 ರೂ. ಇಳಿಕೆಯಾಗಿದ್ದು, 1,00,550 ರೂ.ಗೆ ತಲುಪಿದೆ.

ಬೆಳ್ಳಿಯ ಬೆಲೆ ಸಾವಿರ ರೂ. ಇಳಿಕೆಯಾಗಿದೆ. ಶುಕ್ರವಾರ ಕೆಜಿಗೆ 1,08,100 ರೂ. ಇದ್ದದ್ದು ಸೋಮವಾರ 1,07,100 ರೂ. ಆಗಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net