

ನವದೆಹಲಿ: ದಾಸ್ತಾನುದಾರರಿಂದ ಮಾರಾಟ ಹೆಚ್ಚಾದ ಹಿನ್ನೆಲೆಯಲ್ಲಿ ಚಿನ್ನದ ದರ ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ 200 ರೂ. ಕಡಿಮೆಯಾಗಿದೆ.
ಸೋಮವಾರ 10 ಗ್ರಾಂಗೆ 99,570 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನ ಮಂಗಳವಾರ 99,370 ರೂ. ಆಗಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನ 99,000 ರೂ. ಇದ್ದದ್ದು 98,800 ರೂ.ಗೆ ಇಳಿದಿದೆ. ಬೆಳ್ಳಿ ಬೆಲೆ 3 ಸಾವಿರ ರೂ. ಇಳಿಕೆಯಾಗಿದ್ದು ಕೆಜಿಗೆ 1,12,000 ರೂ.ಗೆ ತಲುಪಿದೆ.
ಸೋಮವಾರ ಇದು ಒಮ್ಮೆಲೇ 5 ಸಾವಿರ ರೂ.ನಷ್ಟು ಏರಿಕೆಯಾಗಿ 1,15,000 ರೂ.ಗೆ ತಲುಪಿ, ಸಾರ್ವಕಾಲಿಕ ಗರಿಷ್ಠ ದಾಖಲೆ ನಿರ್ವಿುಸಿತ್ತು ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.