ರಾಜ್ಯದಲ್ಲಿ ಚಲನಚಿತ್ರ ಟಿಕೆಟ್ ದರ 200 ರೂ. ಮೀರುವಂತಿಲ್ಲ! ದುಬಾರಿ ದರಕ್ಕೆ ಸರ್ಕಾರ ಬ್ರೇಕ್​ | Cinema Ticket

6aa755de-1c54-4ce3-ba8b-6a709c3804b5
Published on

Cinema Ticket: ದುಬಾರಿ ಟಿಕೆಟ್​ ದರದ ಹಿನ್ನಲೆ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾ ವೀಕ್ಷಿಸಲು ಹಿಂದೇಟು ಹಾಕುತ್ತಿದ್ದ ಚಿತ್ರಪ್ರೇಮಿಗಳಿಗೆ ಇದೀಗ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.

ಇನ್ಮುಂದೆ ರಾಜ್ಯದಲ್ಲಿ ಸಿನಿಮಾ ಟಿಕೆಟ್ ದರ 200 ರೂ. ಮೀರುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದು ಕೇವಲ ಚಿತ್ರಮಂದಿರ ಮಾತ್ರವಲ್ಲ, ಮಲ್ಟಿಪ್ಲೆಕ್ಸ್​ಗಳಿಗೂ ಜಾರಿಯಾಗಲಿದೆ. ಸರ್ಕಾರದ ಈ ನಿರ್ಧಾರಕ್ಕೆ ಸಿನಿಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.

ಕೇವಲ ಕನ್ನಡ ಸಿನಿಮಾಗಳಿಗೆ ಮಾತ್ರವಲ್ಲದೇ ಇತರ ಭಾಷೆಯ ಚಿತ್ರಗಳಿಗೂ 200 ರೂ. ಟಿಕೆಟ್ ದರ​ ನಿಗದಿಯಾಗಲಿದೆ. ಈ ನಿಯಮ ಎಲ್ಲಾ ಚಿತ್ರರಂಗದ ಸಿನಿಮಾಗಳಿಗೂ ಅನ್ವಯಿಸಲಿದೆ. ಇತ್ತೀಚಿನ ಬೆಳವಣಿಗೆಗಳು ಹಾಗೂ ಒಂದಷ್ಟು ಬೇಡಿಕೆಗಳನ್ನು ಗಮನದಲ್ಲಿರಿಸಿ, ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿರುವುದು ಗಮನಾರ್ಹ.

ಸರ್ಕಾರದ ನಿರ್ಧಾರಕ್ಕೆ ಇವೇ ಕಾರಣ!

ಕಳೆದ ವರ್ಷಗಳಲ್ಲಿ ಹಲವಾರು ಚಿತ್ರಮಂದಿರಗಳು ಪ್ರೇಕ್ಷಕರಿಲ್ಲದೇ ಮುಚ್ಚಲಾಗಿವೆ. ಸಿನಿಮಾಗಳು ರಿಲೀಸ್​ ಆದರೂ ಜನರು ಥಿಯೇಟರ್​ಗೆ ಬಾರದ ಕಾರಣ ಕನ್ನಡ ಚಿತ್ರರಂಗ ಕೂಡ ನಷ್ಟದಲ್ಲಿದೆ. ಇದರೊಂದಿಗೆ ಮಲ್ಟಿಪ್ಲೆಕ್ಸ್​ಗಳಲ್ಲಿ ತೆರೆಕಾಣುವ ಪರಭಾಷೆಯ ಚಿತ್ರಗಳು ಟಿಕೆಟ್​ ದರವನ್ನು ದಿಢೀರ್​ ದುಬಾರಿಗೊಳಿಸಿ, ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತವೆ. ಈ ಹಿನ್ನಲೆ ಹಲವರು ಟಿಕೆಟ್​ ದರ ಇಳಿಕೆಯಾಗಬೇಕು ಎಂದು ಬೇಡಿಕೆಯಿಟ್ಟಿದ್ದರು. ಕೊನೆಗೂ ಇದಕ್ಕೆ ಸ್ಪಂದಿಸಿರುವ ಸರ್ಕಾರ, ಆದೇಶ ಹೊರಡಿಸುವ ಮೂಲಕ ಅಧಿಕೃತಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net