ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ದೇವಮಾನವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು ಮಂಜೂರು | Interim Bail

dk - 2025-01-07T135649.200
Published on

ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ದೇವಮಾನವ ಅಸಾರಾಂ ಬಾಪುಗೆ ವೈದ್ಯಕೀಯ ಕಾರಣಗಳಿಂದಾಗಿ ಮಾರ್ಚ್​ 31ರ ವರೆಗೆ ಸುಪ್ರೀಂಕೋರ್ಟ್ ​ಮಂಗಳವಾರ ಮಧ್ಯಂತರ ಜಾಮೀನು ಮಂಜೂರು(Interim Bail)ಮಾಡಿದೆ.

ಸಾಕ್ಷಿ ಹಾಳು ಮಾಡದಂತೆ ಮತ್ತು ಬಿಡುಗಡೆಯ ನಂತರ ತಮ್ಮ ಅನುಯಾಯಿಗಳು ಸೇರಿದಂತೆ ಯಾರನ್ನು ಭೇಟಿ ಮಾಡದಂತೆ ಕೋರ್ಟ್​ ನಿರ್ದೇಶಿಸಿದೆ.

ಅಸಾರಾಂ ಬಾಪು ಸದ್ಯ ಜೋದ್​ಪುರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭಿಸುತ್ತಿದ್ದಾರೆ. ಬಿಡುಗಡೆ ಬಳಿಕ ಜೋದ್​ಪುರ ಆರೋಗ್ಯ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಬಾಪು ಹೃದ್ರೋಗಿಯಾಗಿದ್ದಾರೆ. ಈ ಹಿಂದೆ ಹೃದಾಯಘಾತಕ್ಕೆ ಒಳಾಗಾಗಿದ್ದರು. ಅವರ ಜಾಮೀನಿನ ಅವಧಿಯಲ್ಲಿ ಮೇಲ್ವಿಚಾರಣೆ ಕೈಗೊಳ್ಳಲು ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಕೋರ್ಟ್​ ನಿರ್ದೇಶಿಸಿದೆ.

ಆಶ್ರಮದಲ್ಲಿ ಹದಿಹರಿಯದ ಹುಡುಗಿಯ ಮೇಲೆ ಅತ್ಯಾಚಾರ ಎಸೆಗಿದ್ದಕ್ಕಾಗಿ ಜೋಧ್​ಪುರ್​ ನ್ಯಾಯಾಲಯವು ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 2013ರಲ್ಲಿ ಅವರ ಆಶ್ರಮದಲ್ಲಿ ಹಲವಾರು ಸಂದರ್ಭದಲ್ಲಿ ಮಹಿಳಾ ಶಿಷ್ಯರ ಮೇಲೆ ಅತ್ಯಾಚಾರ ಎಸೆಗಿದ್ದಕ್ಕಾಗಿ 2023ರಲ್ಲಿ ಅಪರಾಧಿ ಎಂದು ಸಾಕ್ಷ್ಯಧಾರಗಳ ಮೂಲಕ ಪರಿಗಣಿಸಿ ಶಿಕ್ಷೆ ವಿಧಿಸಿತ್ತು.(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net