

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್ -ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಹೀನಾಯ ಸೋಲಿನ ಪರಿಣಾಮ ಆಯ್ಕೆ ಸಮಿತಿ(BCCI) ಮುಂದಿನ ಟೆಸ್ಟ್ ಸರಣಿಗಳಿಗೆ ತಂಡ ಆಯ್ಕೆ ಮಾಡಲು ಸಂದಿಗ್ಧತೆ ಪರಿಸ್ಥಿತಿಯಲ್ಲಿ ಸಿಲುಕಿದೆ.
ಹೌದು, ಸ್ಟಾರ್ ಬ್ಯಾಟ್ಮ್ಯಾನ್ಸ್ಗಳಿಂದ ತುಂಬಿದ ಟೀಮ್ ಇಂಡಿಯಾ ತಂಡದಲ್ಲಿ ಯಾರನ್ನು ಕೈಬಿಡಬೇಕು ಅಥವಾ ಆಯ್ಕೆ ಮಾಡಬೇಕು ಎಂದು ಆಲೋಚಿಸುವಂತಾದೆ. ಅಲ್ಲದೆ, ಹಿರಿಯ ಬ್ಯಾಟ್ಸ್ಮ್ಯಾನ್ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಳೆಪೆ ಬ್ಯಾಟಿಂಗ್ ಪ್ರದರ್ಶನದಿಂದ ಟೀಮ್ ಮತ್ತು ಆಟಗಾರರ ವಿರುದ್ದ ಭಾರಿ ಟೀಕೆ ವ್ಯಕ್ತವಾಗಿವೆ. ವ್ಯಕ್ತವಾಗುತ್ತಲೆ ಇವೆ. ಈ ನಡುವೆ ನಾಯಕ ರೋಹಿತ್ ತಮ್ಮ ನಿವೃತ್ತಿ ಬಗ್ಗೆ ಮನಸ್ಸು ಮಾಡಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಇದರಿಂದ ಬಿಸಿಸಿಐ ಮಂಡಳಿ ದುರ್ಬಲವಾಗಿದೆಯೇ ಎಂದು ಅನುಮಾನಗಳು ಮೂಡಿವೆ.
ಇದೆಲ್ಲದರ ನಡುವೆ ಬಿಸಿಸಿಐ ಅಧಿಕಾರಿಯೊಬ್ಬರು ‘’ ತಂಡಕ್ಕೆ ಸ್ಟಾರ್ ಆಟಗಾರರು ಬೇಕಿಲ್ಲ. ಯಾವ ಆಟಗಾರನು ಆಟಕ್ಕಿಂತ ದೊಡ್ಡವರಲ್ಲ. ಕೊಹ್ಲಿ ಮತ್ತು ರೋಹಿತ್ ಅವರನ್ನು ತಂಡದಿಂದ ಕೈಬಿಡುವಂತೆ ಮಂಡಳಿಯ ಹೊಸ ಪ್ರಧಾನ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅರ್ಗಕರ್ ಅವರಿಗೆ ಹೇಳಿದ್ದಾರೆ. ಅಲ್ಲದೆ, ’ತಂಡಕ್ಕೆ ಕಟ್ಟುನಿಟ್ಟಾದ ಬಲವಾದ ಸಂದೇಶ’ ಕಳಿಸುವಂತೆ ಮನವಿ ಮಾಡಿದ್ದಾರೆ’’ ಎಂದು ವರದಿಯಾಗಿದೆ.
ಹೊಸ ತಂಡ ಕಟ್ಟುವ ಮೂಲಕ ಆಟಗಾರರಿಗೆ ಮತ್ತು ಭಾರತಕ್ಕೆ ಹೊಸ ಸಂದೇಶ ಕೊಡಬೇಕು. ಬಿಸಿಸಿಐ ದೇಶದಲ್ಲಿ ಆಟವನ್ನು ಮುನ್ನೆಡಸಬೇಕು ಸ್ಟಾರ್ ಆಟಗಾರರನ್ನು ಅಲ್ಲ ಆಟಕ್ಕೆ ಏನೋ ಬೇಕು ಅದನ್ನು ಮಾಡಿಬೇಕು. ಬಲವಾದ ಸಂದೇಶ ನೀಡಿಬೇಕು ಎಂದು ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿವೆ.
ಭಾರತ ತನ್ನ ಮುಂದಿನ ಟೆಸ್ಟ್ ಪಂದ್ಯಕ್ಕೆ ಜೂನ್ ಅಂತಿಮದಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಲಿದೆ. (ಏಜೆನ್ಸೀಸ್)