

ಬಿಲಾಸ್‌ಪುರ: ಮೇಕೆಯನ್ನು ಕೊಂದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿರುವ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ: ತಮ್ಮ ಸಮಾಧಿಯನ್ನು ತಾವೇ ತೋಡಿಕೊಳ್ಳುತ್ತಿರುವ ಸ್ವಾಮಿಜಿ..!
ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಒಬ್ಬ ಆರೋಪಿಯನ್ನೂ ಬಂಧಿಸಲಾಗಿದೆ. ವಾಸ್ತವವಾಗಿ, ಬಚಾಲಿ ಖುರ್ದ್ ನಿವಾಸಿ ಪರದೇಸಿ ರಾಮ್ ಮಾರ್ಕಮ್ ಅವರು ಮೇಕೆಯನ್ನು ಕತ್ತು ಹಿಸುಕಿ ಕೊಂದಿರುವ ಬಗ್ಗೆ ದೂರಿನೊಂದಿಗೆ ರತನ್‌ಪುರ ಪೊಲೀಸರನ್ನು ಸಂಪರ್ಕಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗ್ರಾಮದ ಉಮಾಶಂಕರ್ ರಜಪೂತ ಮತ್ತು ಆತನ ಚಾಲಕ ತನ್ನ ಮೇಕೆಯನ್ನು ಕತ್ತು ಹಿಸುಕಿ ಕೊಂದ ಬಳಿಕ ಮೃತದೇಹವನ್ನು ಎಸೆದಿದ್ದಾರೆ ಎಂದು ಮೇಕೆಯ ಮಾಲೀಕ ಪೊಲೀಸರಿಗೆ ದೂರಿದ್ದಾನೆ.
ಇದನ್ನು ಕೇಳಿದ ಪೊಲೀಸರು ಆಶ್ಚರ್ಯಚಕಿತರಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸತ್ಯಾಂಶ ಬಯಲಿಗೆ ಬಂದಿದೆ. ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಪೊಲೀಸರು ಮೂಕ ಪ್ರಾಣಿಯನ್ನು ಏಕೆ ಕೊಂದಿದ್ದೀರಿ ಎಂದು ಪೊಲೀಸರು ಆರೋಪಿಗೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಆರೋಪಿ, ಮೇಕೆ ಆಗಾಗ ತನ್ನ ಹೊಲಕ್ಕೆ ನುಗ್ಗಿ ಗಿಡಗಳನ್ನು ತಿನ್ನುತ್ತಿತ್ತು. ಈ ಬಗ್ಗೆ ಮೇಕೆಯ ಮಾಲೀಕರಿಗೂ ದೂರು ನೀಡಿದ್ದೆ. ಆದರೆ, ಸಮಸ್ಯೆಗೆ ಪರಿಹಾರ ಕಾಣದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ. ಈ ಪ್ರಕರಣದಲ್ಲಿ ಸಂಬಂಧಪಟ್ಟ ಸೆಕ್ಷನ್‌ಗಳಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)