ಹತ್ತು ಸಾವಿರ ಗಡಿ ದಾಟಿದ ಕರೊನಾ ಸೋಂಕಿತರ ಸಾವಿನ ಸಂಖ್ಯೆ: ಚೀನಾವನ್ನೇ ಹಿಂದಿಕ್ಕಿದ ಇಟಲಿ

corona move-1 mar 20
Published on

ವಾಷಿಂಗ್ಟನ್​: ಜಾನ್ಸ್​ ಹಾಕಿನ್ಸ್​ ವಿಶ್ವವಿದ್ಯಾಲಯದ ಡೇಟಾ ಪ್ರಕಾರ ಜಾಗತಿಕವಾಗಿ ಕರೊನಾ ವೈರಸ್​ ಮಹಾಮಾರಿಗೆ ಮೃತಪಟ್ಟವರ ಸಂಖ್ಯೆ 10 ಸಾವಿರ ಗಡಿಯನ್ನು ಮೀರಿರುವುದಾಗಿ ವರದಿಯಾಗಿದೆ.

ಸೋಂಕಿತರ ಸಂಖ್ಯೆ 2,44,500ವನ್ನು ಮೀರುತ್ತಿದ್ದು, ಕರೊನಾ ವೈರಸ್​ ಸ್ಪೋಟಗೊಂಡ ಚೀನಾವನ್ನು ಹೊರತುಪಡಿಸಿ 1,63,000 ಪ್ರಕರಣಗಳನ್ನು ಹೊರಭಾಗದಲ್ಲಿ ಪತ್ತೆಯಾಗಿವೆ. ಗುರುವಾರ 39 ಹೊಸ ಪ್ರಕರಣಗಳು ಚೀನಾದಲ್ಲಿ ಪತ್ತೆಯಾಗಿವೆ.

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಹೆಚ್ಚುವರಿ ಮೂಲಗಳು ವರದಿ ಮಾಡುವ ಕರೊನಾ ವೈರಸ್​ ಪ್ರಕರಣಗಳನ್ನು ಜಾನ್​ ಹಾಕಿನ್ಸ್​ ವಿವಿ ಪತ್ತೆಹಚ್ಚುವ ಕೆಲಸವನ್ನು ಮಾಡುತ್ತಿದೆ.

ಒಟ್ಟು 160 ದೇಶಗಳಲ್ಲಿ ಕರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಜಾಗತಿಕವಾಗಿ ಶೇ. 35 ಮಂದಿ ಸೋಂಕಿನಿಂದ ಚೇತರಿಕೆ ಕಾಣುತ್ತಿದ್ದಾರೆ ಎಂದು ಜಾನ್ಸ್​ ಹಾಕಿನ್ಸ್​ ವಿವಿ ವರದಿ ನೀಡಿದೆ.

ಚೀನಾವನ್ನೂ ಮೀರಿಸಿದ ಇಟಲಿ

ಮೊದಲಿಗೆ ಕರೊನಾ ವೈರಸ್​ ಸ್ಪೋಟಗೊಂಡ ಚೀನಾವನ್ನು ಇಟಲಿ ಮೀರಿಸಿದ್ದು, ಈವರೆಗೂ 3405 ಸಾವಿನ ಪ್ರಕರಣಗಳು ಇಟಲಿಯಲ್ಲಿ ವರದಿಯಾಗಿದೆ. 41 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಇನ್ನು ಚೀನಾದಲ್ಲಿ 3245 ಮಂದಿ ಸಾವಿಗಿಡಾಗಿದ್ದು, ಸೋಂಕಿತರ ಸಂಖ್ಯೆ 81 ಸಾವಿರ ದಾಟಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net