More

    ಕರೊನಾ ಸೋಂಕಿನ ಬಗ್ಗೆ ಭಯವೇ?: ವೃಷಭ ರಾಶಿಯವರು ಹೀಗೆ ಮಾಡಿದರೆ ಬೇಸರದೊಂದಿಗೆ ಕಷ್ಟವೂ ಕರಗಲಿದೆ ನೋಡಿ…

    ನವದೆಹಲಿ: ಮಾರಕ ಕರೊನಾದಿಂದಾಗಿ ಜನರು ಮನೆಯಲ್ಲಿಯೇ ಜಾಂಡ ಹೂಡುವಂತಹ ಸ್ಥಿತಿ ಇಡೀ ದೇಶವಲ್ಲದೆ, ಜಾಗತಿಕವಾಗಿ ನಿರ್ಮಾಣವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾ ಮನೆಯಲ್ಲಿಯೇ ಇರುವುದೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಬೇಸರ ಅನಿಸದೇ ಇರದು.

    ಇದಕ್ಕೆ ನೀವು ಚಿಂತಿಸುವ ಅಗತ್ಯವಿಲ್ಲ. ಬೇಸರವನ್ನು ತೊಡೆದುಹಾಕುವ ಪ್ರಯತ್ನವಾಗಿ ಆಸ್ಟ್ರೋಲಜಿ(ಜ್ಯೋತಿಷ್ಯಶಾಸ್ತ್ರ) ಮೀಮ್ಸ್​ ಖಾತೆಯು ಆಯಾ ರಾಶಿಗೆ ಅನುಗುಣವಾಗಿ ಒಳ್ಳೆಯ ಸಲಹೆಗಳನ್ನು ನೀಡಿದ್ದು, ಅದನ್ನು ಪಾಲಿಸಿದರೇ ನಿಮ್ಮ ಬೇಸರವೆಲ್ಲ ಮಂಗಮಾಯವಾಗಲಿದೆ.

    12 ರಾಶಿಗಳಿಗೆ ಹಾಸ್ಯಾತ್ಮಕ ಸಲಹೆಯುಳ್ಳ ಪಟ್ಟಿಯೊಂದನ್ನು ಬರಹಗಾರ್ತಿ ಕರ್ಟೆನಿ ಪರ್ಕಿನ್ಸ್​ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ, ಸಲಹೆಯೊಂದನ್ನು ನೀಡಿದ್ದು, ಮೀಮ್ಸ್​ ಖಾತೆ ಹೊರತಾಗಿ ಆರೋಗ್ಯ ಸಲಹೆಗಾಗಿ ವೈದ್ಯರನ್ನೇ ಸಂಪರ್ಕಿಸಿ, ಜೋತಿಷ್ಯವನ್ನು ನಂಬುವುದಕ್ಕಿಂತ ಹೆಚ್ಚಾಗಿ ವೈದ್ಯರನ್ನೇ ನಂಬಿ ಎಂದು ತಿಳಿಸಿದ್ದಾರೆ.

    ವೃಷಭ ರಾಶಿಯವರಿಗೆ ಸಲಹೆ ನೀಡಿರುವ ಬರಹಗಾರ್ತಿ ಕರ್ಟೆನಿ, ನಿಮ್ಮ ದಿಂಬುಗಳನ್ನು ಬಳಸಿಕೊಂಡು ಸ್ನೇಹಶೀಲ ವಾತಾವರಣವನ್ನು ಸೃಷ್ಟಿಸಿಕೊಳ್ಳುವುದರೊಂದಿಗೆ ರೊಮ್ಯಾಂಟಿಕ್​ ಕಾಮಿಡಿಗಳನ್ನು ಎಂಜಾಯ್​ ಮಾಡಿ ಎಂದಿದ್ದಾರೆ. ಇದಲ್ಲದೆ, ಮೋಲಿ ಬಜ್​ ಅವರ ರೆಸಿಪಿಯನ್ನು ಕಲಿಯಿರಿ ಎಂದು ಮತ್ತೊಂದು ಸಲಹೆಯನ್ನು ನೀಡಿದ್ದಾರೆ. ಮೋಲಿ ಅವರು ಬೊನ್​ ಅಪೆಟಿಟ್​ ಮ್ಯಾಗಜಿನ್​ನಲ್ಲಿ ಆಹಾರ ಸಂಪಾದಕಿಯಾಗಿದ್ದಾರೆ. (ಏಜೆನ್ಸೀಸ್​)

    ಕರೊನಾ ಸೋಂಕಿನ ತಾತ್ಕಾಲಿಕ ಬಂದ್​ನಿಂದ ಬೇಸರವೇ? ಮೇಷ ರಾಶಿಯವರು ಹೀಗೆ ಮಾಡಿದರೆ ಬೋರ್​ ಆಗುವುದಿಲ್ಲ

    ಕರೊನಾ ಸೋಂಕಿನ ಬಗ್ಗೆ ಭಯವೇ?: ವೃಷಭ ರಾಶಿಯವರು ಹೀಗೆ ಮಾಡಿದರೆ ಬೇಸರದೊಂದಿಗೆ ಕಷ್ಟವೂ ಕರಗಲಿದೆ ನೋಡಿ...

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts