ಏಡ್ಸ್ ಬಾಧಿತರಿಗೆ ಮಾನಸಿಕ ಸ್ಥೈರ್ಯ ತುಂಬಿ

HUN-DEC-12-8(HEALTH DEPT PROGRAMME)
Published on

ಹುಣಸೂರು: ಏಡ್ಸ್ ಬಾಧಿತ ರೋಗಿಗಳಿಗೆ ಮಾನಸಿಕ ಸ್ಥೈರ್ಯ ನೀಡುವ ಕಾರ್ಯವನ್ನು ಸಮಾಜ ಮಾಡಬೇಕಿದೆ ಎಂದು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನಿಸಾ ಅಭಿಪ್ರಾಯಪಟ್ಟರು.


ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಹಾಗೂ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ)ದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಏಡ್ಸ್ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ 24 ಲಕ್ಷ ಜನರು ಏಡ್ಸ್‌ನಿಂದ ಬಳಲುತ್ತಿದ್ದಾರೆ. ಎಚ್‌ಐವಿ ರೋಗದ ಮೊದಲ ಹಂತವಾದರೆ, ಏಡ್ಸ್ ಎರಡನೇ ಹಂತವಾಗಿದೆ. ಸಮರ್ಪಕ ಔಷಧೋಪಚಾರ ಹುಡುಕಾಟ ಇಂದಿಗೂ ನಡೆದಿದೆ. ಏಡ್ಸ್ ಬಾಧಿತರನ್ನು ನಾವು ಅಸ್ಪಶ್ಯರಂತೆ ನೋಡುವುದನ್ನು ಬಿಡಬೇಕು. ಅವರು ನಮ್ಮಲ್ಲಿ ಒಬ್ಬರು ಎನ್ನುವ ಮನೋಭಾವನೆಯೊಂದಿಗೆ ಅವರ ಜೀವಿತಾವಧಿಯಲ್ಲಿ ಮಾನಸಿಕ ಸ್ಥೈರ್ಯ ತುಂಬಬೇಕು ಎಂದು ಹೇಳಿದರು.


ಸಂಚಾರ ಗಿರಿಜನ ಆರೋಗ್ಯ ಘಟಕದ ವೈದ್ಯಾಧಿಕಾರಿ ಡಾ.ಎಚ್.ಕೆ.ಸೌಮ್ಯಶ್ರೀ ಏಡ್ಸ್ ಕಾಯಿಲೆ ಕುರಿತು ಮಾಹಿತಿ ನೀಡಿದರು. ಜಿಟಿಟಿಸಿ ಕಾಲೇಜಿನ ಪ್ರಾಂಶುಪಾಲ ಕೆ.ಎ.ವಿಶ್ವಕುಮಾರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಪ್ರಾಧ್ಯಾಪಕ ಚಂದ್ರಶೇಖರ್, ಲೋಕೇಶ್, ವಕೀಲ ವೆಂಕಟೇಶ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ವೇಳೆ ಆರೋಗ್ಯ ಇಲಾಖೆಯಿಂದ ಏಡ್ಸ್‌ದಿನಾಚರಣೆ ಕುರಿತು ಆಯೋಜಿಸಿದ್ದ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಚೆಕ್ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net