

Mia Khalifa : ಜನಪ್ರಿಯ ನೀಲಿತಾರೆ ಮಿಯಾ ಖಲೀಫಾ ಅವರ ದೀರ್ಘಾಯುಷ್ಯಕ್ಕಾಗಿ ವೃದ್ಧರೊಬ್ಬರು ಕರ್ವಾ ಚೌತ್ ಆಚರಿಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿವಾಹಿತ ಮಹಿಳೆಯರು ತಮ್ಮ ಗಂಡನ ಯೋಗಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಪೂಜೆ ಮತ್ತು ಉಪವಾಸ ವೃತವನ್ನು ಒಳಗೊಂಡಿರುವ ಕರ್ವಾ ಚೌತ್ ಅನ್ನು ಆಚರಿಸುತ್ತಾರೆ. ಈ ಕರ್ವಾ ಚೌತ್ ದಿನ ಮಹಿಳೆಯರು ಆಚರಿಸುವ ಪ್ರತಿಯೊಂದು ಪೂಜಾ ವಿಧಾನವನ್ನು ವೈರಲ್ ವಿಡಿಯೋದಲ್ಲಿರುವ ವೃದ್ಧ ಅನುಸರಿಸಿದ್ದಾನೆ. ಪೂಜೆ ವೇಳೆ ಬಳಸುವ ತಾಲಿ ಮತ್ತು ಚಂದ್ರನನ್ನು ನೋಡಲು ಬಳಸುವ ಚನ್ನಿಯನ್ನು ಬಳಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮನೆಯ ಗೋಡೆಯ ಮೇಲಿರುವ ಮಿಯಾ ಖಲೀಫಾಳ ಚಿತ್ರವನ್ನು ನೋಡುತ್ತಾ ಪೂಜೆ ಮುಗಿಸಿದ್ದಾರೆ.
ವಿಡಿಯೋ ವೈರಲ್ ಆಗಿದ್ದರೂ ವೃದ್ಧನ ವಿರುದ್ಧ ಭಾರೀ ಟೀಕೆಗಳು ಸಹ ವ್ಯಕ್ತವಾಗಿವೆ. ಪವಿತ್ರ ಆಚರಣೆಗಳನ್ನು ಅಪವಿತ್ರಗೊಳಿಸಲಾಗಿದೆ ಎಂಬುದು ಪ್ರಮುಖ ಟೀಕೆಯಾಗಿದೆ. ಶ್ರದ್ಧಾಭಕ್ತಿಯಿಂದ ಮಾಡಬೇಕಾದ ಆಚರಣೆಗಳನ್ನು ಇತರರು ಗೇಲಿ ಮಾಡುವ ರೀತಿಯಲ್ಲಿ ಹಾಗೂ ವಿಕೃತ ರೀತಿಯಲ್ಲಿ ಮಾಡುವುದು ಯಾವ ರೀತಿಯಲ್ಲೂ ಒಪ್ಪಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಇನ್ನು ಕೆಲವರು ಮುದುಕನ ಕೃತ್ಯವನ್ನು ಕಂಡು ನಕ್ಕು ಸುಮ್ಮುನಾಗಿದ್ದಾರೆ.
ಅಂದಹಾಗೆ ಕರ್ವಾ ಚೌತ್, ಉತ್ತರ ಭಾರತದಲ್ಲಿ ಹಿಂದೂ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಸೂರ್ಯೋದಯದಿಂದ ಚಂದ್ರೋದಯದವರೆಗೆ ನಡೆಸುವ ಪ್ರಮುಖ ಆಚರಣೆಯಾಗಿದೆ. ಅವರು ಅದನ್ನು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತಾರೆ. ಕೆಲವು ಸ್ಥಳಗಳಲ್ಲಿ ಅವಿವಾಹಿತ ಹುಡುಗಿಯರು ಕೂಡ ತಮ್ಮ ಭಾವಿ ವರನಿಗಾಗಿ ಕರ್ವಾ ಚೌತ್ ಮಾಡುತ್ತಾರೆ. (ಏಜೆನ್ಸೀಸ್)