Dowry harassment: ಗಂಡನ ಮನೆಯ ಹಣದಾಸೆಗೆ ಬೇಸತ್ತು ಕಾಲೇಜು ಪ್ರಾಧ್ಯಪಕಿಯೊಬ್ಬಳು ಸಾವಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದಿದೆ.
ಮೃತಳನ್ನು ಕೇರಳದ ಪಿರವಂತೂರಿನ ನಿವಾಸಿ ಶ್ರುತಿ (25) ಎಂದು ಗುರುತಿಸಲಾಗಿದೆ. ಕನ್ಯಾಕುಮಾರಿ ಜಿಲ್ಲೆಯ ಸುಚೀಂದ್ರಂ ಪಟ್ಟಣದಲ್ಲಿರುವ ಗಂಡ ಕಾರ್ತಿಕ್ ಮನೆಯಲ್ಲಿ ನೇಣುಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ.
ಕಾರ್ತಿಕ್, ತಮಿಳುನಾಡು ವಿದ್ಯುತ್ ಮಂಡಳಿಯ ಉದ್ಯೋಗಿ. 6 ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ವರದಿಗಳ ಪ್ರಕಾರ, ಕಾರ್ತಿಕ್ ಅವರ ತಾಯಿ, ಶ್ರುತಿ ಜತೆ ವರದಕ್ಷಿಣೆ ವಿಚಾರವಾಗಿ ಆಗಾಗ ಜಗಳವಾಡುತ್ತಿದ್ದರು. ತಾಯಿಯೊಂದಿಗೆ ದೂರವಾಣಿ ಮೂಲಕ ಶ್ರುತಿ ಮಾತನಾಡಿರುವ ಆಡಿಯೋ ಕೂಡ ಬಿಡುಗಡೆ ಮಾಡಲಾಗಿದೆ.
ಆಡಿಯೋದಲ್ಲಿ ಶ್ರುತಿ, ಅತ್ತೆಯ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ನನ್ನ ಗಂಡನ ಜೊತೆ ಕೂರಲು ಬಿಡುತ್ತಿಲ್ಲ. ಒಟ್ಟಿಗೆ ಕುಳಿತು ತಿನ್ನಲು ಒಪ್ಪುತ್ತಿಲ್ಲ. ತಟ್ಟೆಯ ಬದಲು ಬಟ್ಟಲಿನಲ್ಲಿ ತಿನ್ನಲು ಒತ್ತಾಯಿಸುತ್ತಾರೆ. ಕ್ಷಮಿಸಿ, ನನಗೆ ಸಾಯುವುದನ್ನು ಬಿಟ್ಟರೆ ಬೇರೆ ದಾರಿಯಿಲ್ಲ. ಅವರು ನನ್ನ ಆಭರಣಗಳನ್ನು ಸಹ ಕಸಿದುಕೊಂಡಿದ್ದಾರೆ. ಅದನ್ನು ಮರಳಿ ಪಡೆಯಬೇಕು ಎಂದು ಶ್ರುತಿ ಆಡಿಯೋದಲ್ಲಿ ಹೇಳುತ್ತಾರೆ.
ಶ್ರುತಿಯ ತಂದೆ ತಮಿಳುನಾಡು ವಿದ್ಯುತ್ ಮಂಡಳಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಹೀಗಾಗಿ ಕುಟುಂಬ ತಮಿಳುನಾಡಿಗೆ ತೆರಳಿತ್ತು. ಕಾರ್ತಿಕ್ ಕುಟುಂಬಕ್ಕೆ ವರದಕ್ಷಿಣೆಯಾಗಿ 10 ಲಕ್ಷ ಮತ್ತು 400 ಗ್ರಾಂ ಚಿನ್ನವನ್ನು ನೀಡಲಾಗಿತ್ತು. ಆದರೂ, ವರದಕ್ಷಿಣೆ ಕಡಿಮೆಯಾಗಿದೆ ಎಂದು ಅತ್ತೆ ನಿರಂತರವಾಗಿ ಶ್ರುತಿಗೆ ಕಿರುಕುಳ ನೀಡುತ್ತಿದ್ದರು.
ಈ ವಿಷಯವನ್ನು ಶ್ರುತಿ ತನ್ನ ಮನೆಯವರಿಗೆ ತಿಳಿಸಿದ್ದಳು. ಆದರೆ, ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ಹೇಳಿದ್ದರು. ಆದರೆ, ಕಿರುಕುಳವನ್ನು ಸಹಿಸಲಾರದ ಶ್ರುತಿ ಕೊನೆಗೆ ಸಾವಿನ ಮನೆ ಪ್ರವೇಶ ಮಾಡಿದ್ದಾರೆ. ಘಟನೆ ಸಂಬಂಧ ಸುಚೀಂದ್ರಂ ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)
ಇಷ್ಟೊಂದು ಎಕ್ಸ್ಪೋಸ್ ಬೇಡ! ಕಂಗುವ ಹಾಡಿನಲ್ಲಿ ದಿಶಾ ಪಟಾನಿ ಹಾಟ್ನೆಸ್ ಕಂಡು ಸೆನ್ಸಾರ್ ಮಂಡಳಿ ಶಾಕ್ | Kanguva
ಭಾರಿ ಮಳೆಗೆ ಜೋತು ಬಿದ್ದ ವಿದ್ಯುತ್ ತಂತಿ: ಬೈಕ್ನಲ್ಲಿ ಹೋಗುವಾಗ ಕರೆಂಟ್ ಹೊಡೆದು ಇಬ್ಬರು ಸಾವು | Electrocution