ಪ್ರಿಯಕರನನ್ನು ಭೇಟಿಯಾಗಲು ಇಡೀ ಹಳ್ಳಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ಲು: ಕತ್ತಲಲ್ಲಿ ನಡೆದದ್ದು ಬರೀ ಭೇಟಿಯಲ್ಲ..!

love bihar
Published on

ಪಾಟ್ನಾ: ಹುಡುಗನ ಮೋಹಕ್ಕೆ ಬಿದ್ದ ಹಳ್ಳಿಯ ಹುಡುಗಿಯೊಬ್ಬಳು ಆತನನ್ನು ಬೇಟಿಯಾಗಲು ಇಡೀ ಊರಿನ ವಿದ್ಯುತ್​ನ್ನು ಕಡಿತಗೊಳಿಸಿರುವ ವಿಚಿತ್ರ ಘಟನೆ ಬಿಹಾರದ ಬೆತಿಯಾ ಎಂಬಲ್ಲಿ ನಡೆದಿದೆ.

ಯುವಕ ಯುವತಿಯ ಹೆಸರನ್ನು ಬಹಿರಂಗಗೊಳಿಸದ ಗ್ರಾಮಸ್ಥರು, ಯುವಕ-ಯುವತಿಯನ್ನು ರೆಡ್​ಹ್ಯಾಂಡ್​ಆಗಿ ಹಿಡಿದು ಥಳಿಸಿದ್ದು, ಈ ಕುರಿತಾದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಬೆತಿಯಾ ಗ್ರಾಮದ ನಿವಾಸಿಯಾಗಿರುವ ಬಾಲಕಿ ತನ್ನ ಪ್ರೇಮಿಯನ್ನು ಮುಕ್ತವಾಗಿ ಭೇಟಿಯಾಗಲು ಟ್ರಾನ್ಸ್​​ಫಾರ್ಮರ್​​ನಲ್ಲಿರುವ ಏರ್​ ಬ್ರೇಕ್​​ ಸ್ವಿಚ್​​ನ್ನು ಕೆಳಗೆ ಬಿಳುಸುತ್ತಿದ್ದ ಯುವತಿ, ಊರು ಕತ್ತಲಲ್ಲಿ ಮುಳುಗಿದ ಕೂಡಲೇ ಗುಟ್ಟಾಗಿ ಹೋಗಿ ತನ್ನ ಗೆಳೆಯನನ್ನು ಭೇಟಿಯಾಗುತ್ತಿದ್ದಳು.

ಇದನ್ನೂ ಓದಿ: ಆನ್‌ಲೈನ್ ವಂಚನೆಗೆ ಕಡಿವಾಣ: ಸಿಮ್ ಕಾರ್ಡ್ ಖರೀದಿ, ಬಳಕೆಯ ಮಿತಿಗೆ ಶೀಘ್ರವೇ ಹೊಸ ಕ್ರಮ ಜಾರಿ

ಆರಂಭದಲ್ಲಿ, ಒಬ್ಬ ಹುಡುಗಿ ಇಷ್ಟು ಮಟ್ಟಿಗೆ ಹೋಗುತ್ತಾಳೆ ಎಂದು ಹಳ್ಳಿಯಲ್ಲಿ ಯಾರೂ ಅನುಮಾನಿಸಲಿಲ್ಲ. ರಾತ್ರಿಯಲ್ಲಿ ನಿರಂತರ ವಿದ್ಯುತ್ ಕಡಿತವನ್ನು ಸಹಿಸಲಾಗದ ಗ್ರಾಮಸ್ಥರು ಕಾರಣಗಳನ್ನು ಹುಡುಕಲಾರಂಭಿಸಿದ್ದಾರೆ. ಇದೇ ವೇಳೆ ಗ್ರಾಮದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಬಳಿಕ ಜನರು ನಿಗಾ ವಹಿಸಿದ್ದಾರೆ. ಕೊನೆಗೆ ಜುಲೈ 14ರಂದು ಬಾಲಕಿಯು ವಿದ್ಯುತ್ ಕಡಿತಗೊಳಿಸಲು ಪ್ರಯತ್ನಿಸುತ್ತಿದ್ದಾಗ ಹುಡುಗಿಯನ್ನು ರೆಡ್ ಹ್ಯಾಂಡ್ ಆಗಿ ಗ್ರಾಮಸ್ಥರು ಹಿಡಿದಿದ್ದು, ಈ ವೇಳೆ ಸಮೀಪದಲ್ಲೇ ಇದ್ದ ಯುವಕನಿಗೆ ಥಳಿಸಲು ಪ್ರಾರಂಭಿಸಿದ್ದಾರೆ.

ಈ ವೇಳೆ ಬಾಲಕಿಯು ತನ್ನ ಪ್ರಿಯಕರನನ್ನು ರಕ್ಷಿಸುವುದರ ಜತೆಗೆ ಆತನಿಗಾಗಿ ಜನರೊಂದಿಗೆ ಘರ್ಷಣೆಗೆ ಮುಂದಾಗಿದ್ದಾಳೆ. ಕೊನೆಗೆ ಗ್ರಾಮಸ್ಥರು ಈ ಪ್ರಕರಣವನ್ನು ನೌತಾನ್ ಪೊಲೀಸ್ ಠಾಣೆಯ ಅಧಿಕಾರಿಗಳ ಸಮ್ಮುಖದಲ್ಲಿ ಬಗೆಹರಿಸಿದ್ದು, ಎರಡೂ ಕಡೆಯವರು ಯುವತಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆಗೆ ಒಪ್ಪಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net