More

    VIDEO| ಪ್ರವಾಸಿಗನಿಗೆ ಲಾಠಿ, ರಾಡ್‌ಗಳಿಂದ ಮನಬಂದಂತೆ ಥಳಿಸಿದ ಯುವಕರ ಗುಂಪು

    ಆಗ್ರಾ: ತಾಜ್​ಮಹಲ್ ವಿಕ್ಷಣೆಗೆಂದು ಬಂದಿದ್ದ ಪ್ರವಾಸಿಗನೊಬ್ಬನಿಗೆ ನಾಲ್ಕೈದು ಜನರು ಮನಬಂದಂತೆ ಥಳಿಸಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಇದನ್ನೂ ಓದಿ: 90ನೇ ವಯಸ್ಸಿಗೆ 5ನೇ ಮದುವೆಯಾದ ಅಜ್ಜ, ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ ಮೊಮ್ಮಗ

    ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದದಲ್ಲಿ ಹರಿದಾಡುತ್ತಿದ್ದು,​ ಆಗ್ರಾದ ತಾಜ್‌ಗಂಜ್ ಪ್ರದೇಶದ ಬಸಾಯಿ ಚೌಕಿಯಲ್ಲಿ ಸೋಮವಾರ ಈ ಘಟನೆ ನಡೆದಿದೆ. ಸ್ವೀಟ್ ಅಂಗಡಿಯೊಳಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

    ತಾಜ್‌ಮಹಲ್‌ಗೆ ಭೇಟಿ ನೀಡಲು ನವದೆಹಲಿಯಿಂದ ಬಂದ ಪ್ರವಾಸಿನೊಬ್ಬನ ಕಾರು ಸ್ಥಳೀಯ ಯುವಕರ ಗುಂಪಿನ ಸದಸ್ಯನಿಗೆ ತಾಗಿದ್ದು, ಆಗ ಎಲ್ಲರೂ ಕೂಡಿಕೊಂಡು ಕಾರನ್ನು ಬೆನ್ನಟ್ಟಿ ಲಾಠಿ ಮತ್ತು ರಾಡ್‌ಗಳಿಂದ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದಾರೆ.

    ಟ್ವಿಟ್ಟರ್​​ನಲ್ಲಿ ವಿಡಿಯೋ ವೈರಲ್ ಆಗಿದ್ದು, ಹಲವಾರು ಟ್ವಿಟರ್ ಬಳಕೆದಾರರು ಉತ್ತರ ಪ್ರದೇಶ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ, ವೀಡಿಯೋಗೆ ಪ್ರತಿಕ್ರಿಯಿಸಿರುವ ಪೊಲೀಸರು, ಘಟನೆಯ ಬಗ್ಗೆ ತಿಳಿದುಕೊಂಡಿದ್ದು, ಘಟನೆಯಲ್ಲಿ ಭಾಗಿಯಾಗಿರುವ ಐವರನ್ನು ಬಂಧಿಸಲಾಗಿದೆ ಮತ್ತು ಇತರ ದಾಳಿಕೋರರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಟ್ವೀಟ್​ ಮೂಲಕ ತಿಳಿಸಿದ್ದಾರೆ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts