ಅಪ್ಪ-ಅಮ್ಮ ಬರುವುದನ್ನು ನೋಡಿ ಗೆಳೆಯನನ್ನು ಕಬ್ಬಿಣ ಪೆಟ್ಟಿಗೆಯಲ್ಲಿ ಕೂಡಿಹಾಕಿದ ಗೆಳತಿ! ಮುಂದೇನಾಯ್ತು? Girlfriend and Boyfriend

Girlfriend and Boyfriend
Published on

Girlfriend and Boyfriend: ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ರೀತಿಯ ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳು ವಿಚಿತ್ರ ಹಾಗೂ ವಿಶೇಷ ಕಾರಣಕ್ಕೆ ವೈರಲ್​ ಆಗಿಬಿಡುತ್ತವೆ. ಇತ್ತೀಚೆಗೆ ಅಂಥದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಗೆಳತಿಯೇ ತನ್ನ ಪ್ರಿಯಕರನನ್ನು ಕಬ್ಬಿಣದ ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿರುವ ಪ್ರಸಂಗ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ವೈರಲ್ ಆಗಿರುವ ವಿಡಿಯೋ ನೋಡಿದರೆ, ಇಬ್ಬರು ಮಹಿಳೆಯರು ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ವ್ಯಕ್ತಿ ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ಕಂಡು ಬಂದಿದೆ. ಮನೆಯೊಳಗೆ ಅಲ್ಲಲ್ಲಿ ಬಟ್ಟೆ, ಪೇಪರ್​ಗಳು ನೆಲದ ಮೇಲೆ ಬಿದ್ದಿರುವುದನ್ನು ನಾವು ಗಮನಿಸಬಹುದು. ಮನೆಯಲ್ಲಿ ಯಾರೂ ಇಲ್ಲದ ವಿಚಾರವನ್ನು ತಿಳಿದು ಗೆಳತಿಯನ್ನು ಭೇಟಿಯಾಗಲು ಆಕೆಯ ಮನೆಗೆ ಗೆಳೆಯ ಬಂದಿರುತ್ತಾನೆ. ಇದಾದ ಕೆಲವೇ ಸಮಯದಲ್ಲಿ ಗೆಳತಿಯ ಕುಟುಂಬಸ್ಥರು ಮನೆಗೆ ಬಂದಾಗ ತಕ್ಷಣಕ್ಕೆ ಏನು ಮಾಡಬೇಕೆಂದು ಯೋಚಿಸಿ, ಕೊನೆಗೆ ತನ್ನ ಪ್ರಿಯಕರನನ್ನು ರಕ್ಷಿಸುವ ಉದ್ದೇಶದಿಂದ ಕಬ್ಬಿಣದ ಪೆಟ್ಟಿಗೆಯೊಳಗೆ ಕೂಡಿ ಹಾಕಿ ಬೀಗ ಹಾಕುತ್ತಾಳೆ.

ಮನೆಗೆ ಬಂದ ಪಾಲಕರಿಗೆ ಅನುಮಾನ ಬಂದು ಇಡೀ ಮನೆಯನ್ನು ಶೋಧಿಸುತ್ತಾರೆ. ಕೊನೆಗೆ ಏನು ಸಿಗದಿದ್ದಾಗ ಕಬ್ಬಿಣದ ಪೆಟ್ಟಿಗೆಯನ್ನು ತೆರೆಯುವಂತೆ ಹೇಳುತ್ತಾರೆ. ಆದರೆ, ಆರಂಭದಲ್ಲಿ ತೆರೆಯುವುದಕ್ಕೆ ಒಪ್ಪುವುದಿಲ್ಲ. ತುಂಬಾ ಒತ್ತಾಯ ಮಾಡಿದ ಬಳಿಕ ಕೊನೆಗೆ ಕಬ್ಬಿಣದ ಪೆಟ್ಟಿಗೆಯ ಬೀಗ ತೆರೆಯುತ್ತಾಳೆ. ಈ ವೇಳೆ ಆಕೆಯ ಬಾಯ್​ಫ್ರೆಂಡ್ ಶರ್ಟ್ ಲೆಸ್ ಆಗಿದ್ದು, ದೇಹ ಪೂರ್ತಿ ಬೆವರಿನಿಂದ ತೊಯ್ದು ಹೋಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇಲ್ಲಿಗೆ ವಿಡಿಯೋ ಕೊನೆಗೊಳುತ್ತದೆ.

ಈ ವೀಡಿಯೋ ನೋಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇನ್ನು ಐದು ನಿಮಿಷ ಅಲ್ಲೇ ಇದ್ದಿದ್ದರೆ ಖಂಡಿತ ಆತ ಸಾಯುತ್ತಿದ್ದನು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net