

ಇಲ್ಲೊಬ್ಬಳು ಯುವತಿ ಮುಂಜಾನೆ 4 ಗಂಟೆಗೆ ತನ್ನ ತಾಯಿಗೆ ಮಾಡಿದ ವಾಟ್ಸ್ಆ್ಯಪ್ ಮೆಸೇಜ್ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಅದನ್ನು ಓದಿದರೆ ನಿಮಗೂ ಒಮ್ಮೆ ಅಚ್ಚರಿಯಿಂದ ಹುಬ್ಬೇರುತ್ತದೆ.
ಈ ಘಟನೆ ನಡೆದಿದ್ದು ಎಲ್ಲಿ ಗೊತ್ತಾಗಿಲ್ಲ. @ishaforreals ಎಂಬ ಟ್ವಿಟರ್ ಖಾತೆಯಲ್ಲಿ ವಾಟ್ಸ್ಆ್ಯಪ್ ಚಾಟ್ನ ಸ್ಕ್ರೀನ್ ಶಾಟ್ ಮೊದಲು ಪೋಸ್ಟ್ ಆಗಿದೆ. ಈ ಯುವತಿಗೆ ಮುಂಜಾನೆ 4 ಗಂಟೆಗೆ ಥಟ್ಟನೆ ಎಚ್ಚರವಾಗುತ್ತದೆ. ಹಾಗೇ, ತಾನು ಫ್ರಿಜ್ನಲ್ಲಿ ಮೂರು ತುಂಡು ಫಿಜ್ಜಾ ಮತ್ತು ಸ್ವಲ್ಪ ಫ್ರೈಸ್ ಇಟ್ಟಿದ್ದು ನೆನಪಾಗುತ್ತದೆ. ಹಾಗೇ ಸಹೋದರಿಯ ನೆನಪೂ ಕೂಡ ಆಗುತ್ತದೆ. ಎಲ್ಲಿ ನನಗಿಂತ ಮೊದಲು ತನ್ನ ಸೋದರಿ ಎದ್ದು, ನಾನು ಇಟ್ಟಿದ್ದ ಫಿಜ್ಜಾ, ಫ್ರೈಸ್ಗಳನ್ನು ತಿಂದುಬಿಡುತ್ತಾಳೋ ಎಂಬ ಭಯದಿಂದ ತಾಯಿಗೆ ವಾಟ್ಸ್ಆ್ಯಪ್ನಲ್ಲಿ ಮೆಸೇಜ್ ಮಾಡುತ್ತಾಳೆ.
ನಾನು ಬೆಳಗ್ಗೆ ಎಷ್ಟು ಗಂಟೆಗೆ ಏಳುತ್ತೇನೆ ಗೊತ್ತಿಲ್ಲ. ಆದರೆ ನನಗಿಂತ ಮೊದಲು ಪಿಯು (ಸೋದರಿ) ಎದ್ದರೆ ಖಂಡಿತ ಅವಳು ಫ್ರೈಸ್ ಮತ್ತು ಫಿಜ್ಜಾ ತಿನ್ನುತ್ತಾಳೆ. ಅದೆಷ್ಟೋ ಬಾರಿ ಆಕೆ ಹಾಗೇ ಮಾಡಿದ್ದಾಳೆ. ಆದರೆ ಈ ಬಾರಿ ನಾನು, ನನಗಾಗಿ ಇಟ್ಟಿರುವ ತಿಂಡಿಯನ್ನು ಪಿಯು ತಿನ್ನಲು ನೀನು ಬಿಡಬೇಡ ಅಮ್ಮಾ..ಒಂದೊಮ್ಮೆ ಅವಳು ತಿನ್ನುವುದು ಗಮನಕ್ಕೆ ಬಂದರೆ, ನನ್ನ ಅನುಮತಿ ಪಡೆದು ತಿನ್ನುವಂತೆ ಅವಳಿಗೆ ಹೇಳು ಎಂದು ಉದ್ದನೆಯ ಮೆಸೇಜ್ ಮಾಡಿದ್ದಾಳೆ. ಇದನ್ನೂ ಓದಿ: ರಿಯಾ ಚಕ್ರವರ್ತಿ ಪರ ಕಾಂಗ್ರೆಸ್ ನಾಯಕನ ಬ್ಯಾಟಿಂಗ್; ಬಂಧನ ‘ಹಾಸ್ಯಾಸ್ಪದ’ವಂತೆ
ಒಂದೊಮ್ಮೆ ನಾನು ಎದ್ದು ಫ್ರಿಜ್ ಬಾಗಿಲು ತೆಗೆದಾಗ ಎಲ್ಲವೂ ಖಾಲಿಯಾಗಿರುವುದು ಕಂಡುಬಂದರೆ ನಿಜಕ್ಕೂ ತುಂಬ ನೋವಾಗುತ್ತದೆ. ನೀನು ನನ್ನ ಅಮ್ಮನೇ ಆಗಿದ್ದರೆ, ನನ್ನನ್ನು ಪ್ರೀತಿ ಮಾಡುವುದೇ ಆದರೆ ನನ್ನ ಮೂಡ್ ಬಗ್ಗೆ ಕಾಳಜಿ ವಹಿಸುವುದು ನಿನ್ನ ಕರ್ತವ್ಯ ಎಂದೂ ತನ್ನ ಮೆಸೇಜ್ನಲ್ಲಿ ಬರೆದಿದ್ದಾಳೆ. ಅದಕ್ಕೆ ಅಮ್ಮ ಕೊಟ್ಟ ರಿಪ್ಲೈ..'ಹೇ ಭಗವಾನ್' ಎಂದು.
ಸದ್ಯ ಈ ಟ್ವೀಟ್ ಸಿಕ್ಕಾಪಟೆ ವೈರಲ್ ಆಗುತ್ತಿದೆ. ನೆಟ್ಟಿಗರೂ ಕೂಡ ತಮಗಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)