ತನ್ನ ಇಬ್ಬರು ಸಹೋದರಿಯರನ್ನು ಕೊಂದ ಯುವತಿ..ಕಾರಣ ಕೇಳಿದ್ರೆ ಹೌಹಾರ್ತೀರಾ?​

crime-022204-16x9.jpg
Published on

ಲಖನೌ: ತನ್ನ ಸಹೋದರಿಯರು ತನ್ನನ್ನು ಇಷ್ಟ ಪಡಲಿಲ್ಲ ಎಂಬ ಕಾರಣಕ್ಕೆ 20ವರ್ಷದ ಯುವತಿಯೊಬ್ಬಳು ಇಬ್ಬರು ತಂಗಿಯರನ್ನು ಕತ್ತುಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಇಟಾವಾ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಜನರನ್ನು ಬೆಚ್ಚಿಬೀಳಿಸಿದೆ.

ಪಾಲಕರು ಮೂವರು ಹೆಣ್ಣು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೊರಗೆ ಹೋಗಿದ್ದರು. ಇವರಲ್ಲಿ ಅಂಜಲಿ ಹಿರಿಯವಳು. ಆಕೆಗೆ 20 ವರ್ಷ. ಅವಳ ಜೊತೆಗೆ ಇನ್ನಿಬ್ಬರು ಹುಡುಗಿಯರಿದ್ದಾರೆ. ಒಬ್ಬಳಿಗೆ 7 ವರ್ಷ ಮತ್ತು ಇನ್ನೊಬ್ಬಳಿಗೆ 5 ವರ್ಷ. ಮೂವರು ಮನೆಯಲ್ಲಿಯೇ ಇದ್ದರು. ಆದರೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಅಂಜಲಿ ಒಂಟಿಯಾಗಿ ಕಾಲ ಕಳೆದಿದ್ದಾಳೆ. ಆ ಸಮಯದಲ್ಲಿ ಆಕೆಯ ಇಬ್ಬರು ತಂಗಿಯರು ಇದನ್ನು ವಿರೋಧಿಸಿದ್ದಾರೆ. ಇದನ್ನು ತಂಗಿಯರು ಎಲ್ಲಿ ಪಾಲಕರಿಗೆ ಹೇಳುತ್ತಾರೋ ಎಂದು ಇಬ್ಬರನ್ನು ಕತ್ತು ಹಿಸುಕಿ ಕೊಂದಿದ್ದಾಳೆ. ಕತ್ತು ಹಿಸುಕಲು ಬಳಸಿದ ವಸ್ತುವನ್ನು ನೀರಿನಿಂದ ತೊಳೆದಿದ್ದಾಳೆ. ಇದರಿಂದ ಅಪರಾಧವು ಹೊರಬಂದಿರಲಿಲ್ಲ.

ತಂದೆ-ತಾಯಿ ಬರುವ ಮುನ್ನವೇ ತನ್ನ ರಕ್ತದ ಬಟ್ಟೆಗಳನ್ನು ಯುವತಿ ತೊಳೆದಿದ್ದಳು. ರಾತ್ರಿ ಅವರು ಮನೆಗೆ ಬಂದು ನೋಡಿದಾಗ ಮಕ್ಕಳಿಬ್ಬರು ಸತ್ತು ಬಿದ್ದಿದ್ದರು. ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ನೋಡಿದಾಗ ಹರಿತವಾದ ಆಯುಧ ನೀರಿನಲ್ಲಿ ಕೊಚ್ಚಿ ಹೋಗಿರುವುದು ಕಂಡು ಬಂದಿದೆ. ಅಲ್ಲದೆ, ಅಂಜಲಿಯನ್ನು ಪೊಲೀಸ್​ ಭಾಷೆಯಲ್ಲಿ ವಿಚಾರಿಸಿದಾಗ ಸತ್ಯವನ್ನು ಒಪ್ಪಿಕೊಂಡಿದ್ದಾಳೆ.

ಪೊಲೀಸರು ಅಂಜಲಿಯನ್ನು ಬಂಧಿಸಿದ್ದಾರೆ. ಆದರೆ ಮೂವರು ಮಕ್ಕಳನ್ನು ದೂರ ಮಾಡಿಕೊಂಡು ತಂದೆ-ತಾಯಿ ಮರುಗುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net