ಶಾಲಾ ಸಮವಸ್ತ್ರದಲ್ಲಿ ರಸ್ತೆಯಲ್ಲೇ ಹುಚ್ಚಾಟ: ಹುಡುಗಿಯ ಅಶ್ಲೀಲ, ಅತಿರೇಕ ವರ್ತನೆ ವಿರುದ್ಧ ಆಕ್ರೋಶ

Girl Dance
Published on

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯಲು ಕೆಲ ಮಂದಿ ಸಾರ್ವಜನಿಕ ಪ್ರದೇಶಗಳಲ್ಲಿ ಹುಚ್ಚು ಹುಚ್ಚಾಗಿ ವರ್ತಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದೆ. ಲೈಕ್ಸ್​, ಶೇರ್​​​, ವ್ಯೂವ್ಸ್​ ಮತ್ತು ಫಾಲೋವರ್ಸ್​ ಸಂಖ್ಯೆ ಹೆಚ್ಚಿಸಿಕೊಳ್ಳಲು ಹೆಂಡ ಕುಡಿದ ಕಪಿಯಂತೆ ಆಡುತ್ತಾರೆ. ಅದರಲ್ಲೂ ವಾಹನ ನಿಬಿಡ ರಸ್ತೆಗಳಲ್ಲೇ ಅತಿರೇಕ ಮತ್ತು ಅಶ್ಲೀಲ ವರ್ತನೆ ತೋರುತ್ತಿರುವ ಸಾಕಷ್ಟು ಉದಾಹರಣೆಗಳಿದ್ದು, ಆ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರಿಕೊಂಡಿದೆ.

ಶಾಲಾ ಸಮವಸ್ತ್ರದಲ್ಲಿರುವ ಹುಡುಗಿಯೊಬ್ಬಳು ನಡು ರಸ್ತೆಯಲ್ಲೇ ಹುಚ್ಚುಚ್ಚಾಗಿ, ಅಶ್ಲೀಲವಾಗಿ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ವಿಡಿಯೋದಲ್ಲಿ ಏನಿದೆ? ಶಾಲಾ ಸಮವಸ್ತ್ರದಲ್ಲಿರುವ ಹುಡುಗಿ, ಟ್ರಾಫಿಕ್​ ಸಿಗ್ನಲ್​ ಇರುವಂತಹ ವಾಹನ ನಿಬಿಡ ರಸ್ತೆಯ ಒಂದು ಬದಿಯಿಂದ ನಿಧಾನವಾಗಿ ಮುಂದಕ್ಕೆ ಚಲಿಸಿ, ನಡು ರಸ್ತೆಗೆ ಬಂದ ಕೂಡಲೇ ತನ್ನ ಬಳಿಯಿದ್ದ ಬ್ಯಾಗ್​ ಅನ್ನು ತೆಗೆದು ರಸ್ತೆಗೆ ಎಸೆಯುತ್ತಾಳೆ. ಆ ಬ್ಯಾಗ್​ ಅನ್ನು ಬೇರೊಬ್ಬ ವಿದ್ಯಾರ್ಥಿ ಎತ್ತಿಕೊಳ್ಳುತ್ತಾನೆ. ಇತ್ತ ಹುಡುಗಿ ದಿಢೀರನೇ ರಸ್ತೆಯ ಮೇಲೆ ಮಲಗಿ ವಿಚಿತ್ರ ಭಂಗಿಯಲ್ಲಿ ಅಶ್ಲೀಲವಾಗಿ ಡಾನ್ಸ್​ ಮಾಡುತ್ತಾಳೆ. ಆದರೆ, ರಸ್ತೆಯಲ್ಲಿ ಏನು ನಡೆಯುತ್ತಿದೆ ಎಂಬ ಅರಿವು ಇಲ್ಲದೆ ಟ್ರಾಫಿಕ್​ನಲ್ಲಿ ನಿಂತ ವಾಹನ ಸವಾರರು ಹುಡುಗಿಯನ್ನೇ ನೋಡುತ್ತಿರುತ್ತಾರೆ.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಹುಡುಗಿಯ ವರ್ತನೆ ವಿರುದ್ಧ ಹರಿಹಾಯ್ದಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಈ ರೀತಿಯ ವರ್ತನೆ ಸರಿಯಲ್ಲ, ಅದರಲ್ಲೂ ಟ್ರಾಫಿಕ್​ ಜಾಮ್​ ಸಂದರ್ಭದಲ್ಲಿ ಈ ರೀತಿ ನಡೆದುಕೊಳ್ಳಬಾರದು. ಇದು ಬೇಜವಾಬ್ದಾರಿತನ ಮತ್ತು ಸಂಭಾವ್ಯ ಅಪಾಯಕಾರಿ ಎಂದು ಟೀಕಿಸುತ್ತಿದ್ದಾರೆ.

ಹುಡುಗಿಯ ಅತಿರೇಕದ ವರ್ತನೆ ಜನದಟ್ಟಣೆಯ ಸಮಯದಲ್ಲೇ ಸಂಭವಿಸಿದೆ. ಪ್ರಯಾಣಿಕರು ಪೂರ್ವಸಿದ್ಧತೆಯಿಲ್ಲದ ಅನಿರೀಕ್ಷಿತ ಪ್ರದರ್ಶನವನ್ನು ವೀಕ್ಷಿಸಿದರಿಂದ ಸಂಚಾರದಲ್ಲಿ ತಾತ್ಕಾಲಿಕ ಸ್ಥಗಿತವೂ ಆಯಿತು. ಕೆಲ ವಾಹನ ಚಾಲಕರು ಹುಡುಗಿಯ ವಿರುದ್ಧ ಹತಾಶೆಯನ್ನು ವ್ಯಕ್ತಪಡಿಸಿದರು. ಆದರೆ, ಕೆಲವರು ಹುಡುಗಿಯ ಮನನರಂಜನಾ ಸ್ವಭಾವವನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ಸಾರ್ವಜನಿಕ ಸುರಕ್ಷತೆ ಮತ್ತು ಸುವ್ಯವಸ್ಥೆಯ ಬಗ್ಗೆ ಹುಡುಗಿಗೆ ಪಾಠ ಮಾಡಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿ, ಕೋಲ್ಕತ್ತ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ ಮುಂತಾದ ಮೆಟ್ರೋಪಾಲಿಟನ್ ನಗರಗಳಲ್ಲಿ ಇಂತಹ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ರೀಲ್ಸ್​ಗಾಗಿ ಯುವ ಜನಾಂಗ ಮನಬಂದಂತೆ ವರ್ತಿಸುತ್ತಿದೆ. ಅದರಲ್ಲೂ ಸಾರ್ವಜನಿಕರಿಗೆ ಮುಜುಗರ ಉಂಟು ಮಾಡುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದು, ಇದಕ್ಕೆಲ್ಲ ಕಡಿವಾಣ ಬೀಳಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net